ವಿದ್ಯಾರ್ಥಿನಿಯರಿಂದ ಕ್ಯಾನ್ಸರ್ ರೋಗಿಗಳಿಗೆ ಕೂದಲು ದಾನ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಕೂದಲು ದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಕ್ಯಾನ್ಸರ್ ರೋಗಿಗಳಿಗೆ ತಮ್ಮ ಕೂದಲುಗಳನ್ನು ದಾನ ಮಾಡುವ ಮೂಲಕ ಎಸ್ಸೆಫೈ ಸಂಘಟನೆಯ ವಿದ್ಯಾರ್ಥಿಗಳು ಇತರರಿಗೆ ಮಾದರಿಯಾದರು. ಎಸ್ಸೆಫೈ ಮಾದ್ರಕಂ ಯೂನಿಟ್ ಸಮಿತಿ ಕಾಲೇಜು ಕ್ಯಾಂಪಸ್ಸಿನಲ್ಲಿ ಕೂದಲು ದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ನೂರರಷ್ಟು ವಿದ್ಯಾರ್ಥಿನಿಯರು ಕೂದಲನ್ನು ದಾನ ಮಾಡಿದರು.

ಜಿ ಪಂ ಮಜಿ ಅಧ್ಯಕ್ಷೆ ಪಿ ಶ್ಯಾಮಲಾ ದೇವಿ ಕೂದಲು ದಾನ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, “ಸಮೂಹವನ್ನು ಮನಸಾರೆ ಪ್ರೀತಿಸುವ ಮನಸ್ಸುಗಳಿಗೆ ಮಾತ್ರ ಇಂತಹ ಕೂದಲು ದಾನದಂತಹ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಸಾಧ್ಯವಿದೆ. ಇದರಿಂದಾಗಿ ಅದೆಷ್ಟೋ ಕ್ಯಾನ್ಸರ್ ರೋಗಿಗಳಿಗೆ ಇದೊಂದು ವರದಾನವಾಗಲಿದೆ. ಎಸ್ಸೆಫೈಐ ಸಂಘಟನೆಯ ವಿದ್ಯಾರ್ಥಿಗಳು ತೋರ್ಪಡಿಸಿದ ಈ ಸಮಾಜ ಸೇವೆ ನಿಜಕ್ಕೂ ಶ್ಲಾಘನೀಯ” ಎಂದು ಹೇಳಿದರು. ಕಾಲೇಜು ವಿದ್ಯಾರ್ಥಿನಿಯರು ಕೂದಲನ್ನು ಮಾಡಿದರು.