ವಿಶಿಷ್ಟ ಹೆಡೆಯ ಹೆಣ್ಣು ನಾಗರ ಹಾವು ಹಿಡಿದ ಉರಗತಜ್ಞ ಗುರುರಾಜ ಸನಿಲ್

ನಮ್ಮ ಪ್ರತಿನಿಧಿ ವರದಿ

ಉಡುಪಿ : ಜೀವನದಲ್ಲಿಯೇ ಅತ್ಯಂತ ವಿಶಿಷ್ಟ ಹೆಡೆ ಹೊಂದಿರುವ ಹೆಣ್ಣು ನಾಗರ ಹಾವೊಂದನ್ನು ಉರಗತಜ್ಞ ಗುರುರಾಜ್ ಸನಿಲ್ ಹಿಡಿದಿದ್ದಾರೆ.

ಈಗಾಗಲೇ 20,000ಕ್ಕೂ ಅಧಿಕ ಹಾವುಗಳನ್ನು 15,000ಕ್ಕೂ ಹೆಚ್ಚು ನಾಗನನ್ನು ಹಿಡಿದಿರುವ ಇವರು “ಇಂತಹ ಸುಂದರ ಹೆಣ್ಣು ಹಾವನ್ನು ನನ್ನ ಜೀವನದಲ್ಲಿ ನೋಡೇ ಇಲ್ಲ. ನಿಜಕ್ಕೂ ಈಕೆ ಸುಂದರವಾಗಿದ್ದಾಳೆ” ಎಂದು ಈ ಹಾವು ಹಿಡಿದ ಬಳಿಕ ಪ್ರತಿಕ್ರಿಯೆ ಅವರುನೀಡಿದ್ದಾರೆ.

“ಪರ್ಕಳದ ರಾಜೇಶ್ ಕೋಟ್ಯಾನ್ ಮನೆಗೆ ಬಂದಿದ್ದ ಹಾವು ತನ್ನ ಜೀವನದಲ್ಲಿಯೇ ಮೊತ್ತಮೊದಲ ಬಾರಿಗೆ ನಾನು ಕಂಡಿರುವ ವಿಶಿಷ್ಠ ಹಾವಾಗಿದೆ” ಎಂದು ಸನಿಲ್ ಹೇಳಿದ್ದಾರೆ.

ಮನೆಯೊಳಗೆ ಬಂದಿದ್ದ ನಾಗರ ಹಾವಿಗೆ ಆಹಾರವಾಗಿ ಇಲಿ ಸಿಗದೇ ಸೌದೆ ಶೇಖರಣೆ ಕೋಣೆಯೊಳಗೆ ಮುದುಡಿ ಮಲಗಿತ್ತು. ಅಲ್ಲಿದ್ದ ಹಾವನ್ನು ಕಂಡು ಭಯಭೀತರಾದ ಮನೆ ಮಂದಿ ವಿಶೇಷ ರೀತಿಯ ಹೆಡೆ ಕಂಡು ಕೂಡಲೇ ಉರಗತಜ್ಞ ಸನಿಲಗೆ ಕರೆ ಮಾಡಿ ತಿಳಿಸಿದ್ದರು. ಕಳೆದೊಂದು ವಾರದಿಂದ ಈ ನಾಗರ ಹಾವು ಇಲ್ಲೇ ಸುಳಿದಾಡುತ್ತಿತ್ತು. ಕಟ್ಟಿಗೆಯನ್ನು ಸರಿಸಿ ನೋಡಿದಾಗ ಅದ್ಭುತವಾದ ಹಾವು ಪತ್ತೆಯಾಗಿದೆ ಎನ್ನುತ್ತಾರೆ ಸನಿಲ್.

ಆಗುಂಬೆ ಘಾಟ್ ಸೇರಿದಂತೆ ಭಟ್ಕಳದಿಂದ ಕಾಸರಗೋಡಿನವರೆಗೆ ಸಾವಿರಾರು ಹಾವುಗಳನ್ನು ನಾನು ಹಿಡಿದಿದ್ದೇನೆ. ಕಳೆದ 30 ವರ್ಷಗಳಲ್ಲಿ ಇಂತಹದ್ದೊಂದು ವಿಶಿಷ್ಟ ಹಾವು ಕಂಡಿರುವುದು ಇದೇ ಮೊದಲು ಎನ್ನುವ ಸನಿಲ್, ಈಗಾಗಲೇ 13 ಬಾರಿ ಹಾವುಗಳಿಂದ ಕಚ್ಚಿಸಿಕೊಂಡಿದ್ದಾರೆ. 11 ಬಾರಿ ನಾಗರ ಹಾವು ಕಚ್ಚಿದೆ.