ಗುರುಪುರ-ಕೈಕಂಬದಲ್ಲಿ ಉರಿಯದ ದಾರಿದೀಪ

ಗುರುಪುರ ಕೈಕಂಬ ಪೇಟೆಯಲ್ಲಿ ಕತ್ತಲು ಕವಿಯುತ್ತಿದ್ದಂತೆಯೇ ಬೀದಿ ದೀಪ ಸರಿಯಾಗಿ ಉರಿಯುವುದಿಲ್ಲ.
ವಾಮಂಜೂರು ಸಮೀಪದ ಪರಾರಿಯಿಂದ ಹಿಡಿದು ಗುರುಪುರ ಪೊಳಲಿದ್ವಾರ ಕೈಕಂಬ  ಗಂಜಿಮಠದಿಂದ ಹಿಡಿದು ಎಡಪದವುತನಕ ಯಾವೊಂದು ಬೀದಿ ದೀಪಗಳೂ ಸರಿಯಾಗಿ ಉರಿಯುತ್ತಿಲ್ಲ. ಕೈಕಂಬದಲ್ಲಿ ರಾಷ್ಟ್ರೀಯ ಹೆದ್ದಾರಿ 169 ಹಾದು ಹೋಗುತ್ತಿದ್ದರೂ ಬೀದಿ ದೀಪ ಅಳವಡಿಸದೇ ಇರುವುದರಿಂದ ಕೈಕಂಬದಲ್ಲಿ ಕತ್ತಲಾಯಿತೆಂದರೆ ಪಾದಚಾರಿ ವಾಹನ ಸವಾರರು ಭೀತಿಯಿಂದ ಸಂಚರಿಸಬೇಕಾಗಿದೆ.
ಕೆಲವು ಕಂಬಗಳಿಗೆ ತುಕ್ಕು ಹಿಡಿದಿದ್ದು, ಇಂದೋ ನಾಳೆಯೋ ಮುರಿದು ಬೀಳುವ ಸ್ಥಿತಿಯಲ್ಲಿದೆ. ಕೈಕಂಬದಲ್ಲಿ ಮೆಸ್ಕಾಂ ಶಾಖೆ ಇದ್ದರೂ ಶಾಖಾಧಿಕಾರಿಗಳ ಗಮನಕ್ಕೂ ಬೀಳದಿರುವುದು ವಿಪರ್ಯಾಸವೇ ಸರಿ.
ಮೊದಲೇ ಕೈಕಂಬ ಅತ್ಯಂತ ಕೋಮುಸೂಕ್ಷ್ಮ ಪ್ರದೇಶವಾಗಿದ್ದು, ಅನೇಕ ಕೋಮುಸಾಮರಸ್ಯ ಕದಡುವ ಕೃತ್ಯಗಳು ನಡೆಯುತ್ತಲೇ ಇರುವಾಗ ಇಂಥ ನೋಟೆಡ್ ಪ್ರದೇಶದ ಆಯಕಟ್ಟಿನಲ್ಲಿ ಸಿ ಸಿ ಕೆಮರಾ ಅಳವಡಿಸಬೇಕೆಂಬ ಕೂಗು ಸಾರ್ವಜನಿಕ ವಲಯದಿಂದ ಆಗಾಗ ಕೇಳಿಬಂದಿತ್ತಾದರೂ ಸ್ಥಳೀಯಾಡಳಿ ಮಾತ್ರ ಕ್ಯಾರೇ ಅನ್ನುತ್ತಿಲ್ಲ.

  • ನವೀನ್ ಕೋಟ್ಯಾನ್, ಗುರುಪುರ-ಕೆದುಬರಿ