ನಿದ್ರಿಸುತ್ತಿರುವ ಗುರುಪುರ ಪಂಚಾಯತ್

ಗುರುಪುರ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಅಡ್ಡೂರು ಗ್ರಾಮದಲ್ಲಿ ಕಸ ವಿಲೇವಾರಿಗೆ ಸೂಕ್ತ ವ್ಯವಸ್ಥೆ ಇಲ್ಲದೇ ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲೆಂದರಲ್ಲಿ ಕಸ ಬಿಸಾಕಿ ಹೋಗುತ್ತಿರುವುದರಿಂದ ಕಸ  ಮೀನಿನ ತ್ಯಾಜ್ಯಗಳು ಕೊಳೆತು ಪರಿಸರದಲ್ಲಿ ದುರ್ನಾತ ಬರುತ್ತಿದೆ. ದಿನಾವೂ ಅತ್ತಿತ್ತ ಹೋಗುವಾಗ ವಾಸನೆ ತೆಗೆದುಕೊಂಡು ತಲೆಸಿಡಿತ ಶುರುವಾಗಿದೆ  ಕಸ ಸಮರ್ಪಕ ವಿಲೇವಾರಿ ಕುರಿತು ಸ್ಥಳೀಯ ಸಂಘ ಸಂಸ್ಥೆಗಳು ಮನವಿಗಳ ಮೇಲೆ ಮನವಿ ನೀಡಿದರೂ ಭರವಸೆ ನೀಡಿ ಜನರನ್ನು ಮರಳು ಮಾಡುತ್ತಿದ್ದಾರೆಯೇ ವಿನಃ ಕಸ ವಿಲೇವಾರಿಗೆ ಒಂದು ಸೂಕ್ತ ವ್ಯವಸ್ಥೆ ಕಲ್ಪಿಸುವ ಗೋಜಿಗೂ ಇನ್ನೂ ಹೋಗಿಲ್ಲ  ಒಟ್ಟಿನಲ್ಲಿ ಪಂಚಾಯತ್ ಆಡಳಿತ ಗ್ರಾಮಸ್ಥರ ತಾಳ್ಮೆ ಪರೀಕ್ಷಿಸುತ್ತಿದೆಯೇ ಗೊತ್ತಿಲ್ಲ  ಆದ್ದರಿಂದ ಸಿಕ್ಕಿದ್ದಲ್ಲಿ ಕಸ ಬಿಸಾಡುವುದನ್ನು ನಿಲ್ಲಿಸಲು ಕೂಡಲೇ ಕ್ರಮ ಜರುಗಿಸಬೇಕಾಗಿದೆ

  • ಕೆ ಸುಲೈಮನ್ಅಡ್ಡೂರು ಉಳಿಯ