ಅಪ್ರಾಪ್ತೆಗೆ ಕಿರುಕುಳ : ಗಲ್ಫ್ ಉದ್ಯೋಗಿ ವಿರುದ್ಧ ಕೇಸು

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗಲ್ಫ್ ಉದ್ಯೋಗಿ ವಿರುದ್ಧ ಫೆÇೀಕ್ಸೋ ಕಾಯ್ದೆಯಡಿ ಕೇಸು ದಾಖಲಿಸಲಾಗಿದೆ.

ಮೀಯಪದವು ಸಮೀಪದ ಮದಂಗಲಕಟ್ಟೆ ನಿವಾಸಿ ಗಲ್ಫ್ ಉದ್ಯೋಗಿ ಖಾದರ್ ವಿರುದ್ಧ ಮಂಜೇಶ್ವರ ಪೆÇಲೀಸರು ಕೇಸು ದಾಖಲಿಸಿದ್ದಾರೆ.

“ಖಾದರ್ ಎಂಬಾತ 2016 ಮಾರ್ಚ್ 3ರಂದು ರಾತ್ರಿ 9 ಗಂಟೆಗೆ ತನ್ನ ಮನೆಯಿಂದ ತನ್ನನ್ನು ಬಲವಂತವಾಗಿ ಕಾರಿಗೆ ಹತ್ತಿಸಿಕೊಂಡು ಆತನ ಮನೆಗೆ ಕೊಂಡೊಯ್ದು ಲೈಂಗಿಕ ಕಿರುಕುಳ ನೀಡಿದ್ದಾನೆ” ಎಂದು ಅಪ್ರಾಪ್ತೆ ನೀಡಿದ ದೂರಿನಂತೆ ಪೆÇಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

 

LEAVE A REPLY