ಡಿಸೆಂಬರಲ್ಲಿ ಗುಜರಾತ್ ಅಸೆಂಬ್ಲಿಗೆ ಚುನಾವಣೆ

ಸಾಂದರ್ಭಿಕ ಚಿತ್ರ

ಗಾಂಧಿನಗರ : ಈ ವರ್ಷದ ಡಿಸೆಂಬರಿನಲ್ಲಿ ಗುಜರಾತ್ ಅಸೆಂಬ್ಲಿ ಚುನಾವಣೆ ನಡೆಯಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಅಚಲ್ ಕುಮಾರ್ ಜ್ಯೋತಿ ಪ್ರಕಟಿಸಿದ್ದಾರೆ. “ಜನವರಿ 22ಕ್ಕೆ ಗುಜರಾತ್ ಅಸೆಂಬ್ಲಿ ಅವಧಿ ಮುಗಿಯುತ್ತದೆ. ಹಾಗಾಗಿ ಡಿಸೆಂಬರಿನಲ್ಲಿ ಚುನಾವಣೆ ನಡೆಸಬೇಕಾಗುತ್ತದೆ” ಎಂದು ಚುನಾವಣೆ ನಡೆಯಲಿರುವ ಗುಜರಾತಿನಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಜ್ಯೋತಿ ತಿಳಿಸಿದರು.