ಮದುಮಗ ಅಪಘಾತದಲ್ಲಿ ಮೃತ

 ತಾಯಿಯೊಂದಿಗೆ ಮದುವೆ ಆಮಂತ್ರಣ ನೀಡಲು ಹೊರಟ ಮದುಮಗ ರಸ್ತೆ ಅಪಘಾತದಲ್ಲಿ ಮೃತ

ನಮ್ಮ ಪ್ರತಿನಿಧಿ ವರದಿ

ಬೈಂದೂರು : ತನ್ನ ಮದುವೆ ಆಮಂತ್ರಣ ಪತ್ರ ನೀಡಲೆಂದು ತಾಯಿ ಜೊತೆಗೆ ಬೈಕಿನಲ್ಲಿ ತೆರಳುತ್ತಿದ್ದ ಮದುಮಗ ರಸ್ತೆ ಅಪಘಾತಕ್ಕೆ ಬಲಿಯಾದ ದುರಂತ ಘಟನೆ ನಡೆದಿದೆ. ಇಲ್ಲಿನ ಉಪ್ಪುಂದ ಶಾಲೆಬಾಗಿಲು ಸಮೀಪ ರಾ ಹೆದ್ದಾರಿ 66ರಲ್ಲಿ ಕಾರೊಂದು ಬÉೈಕ್‍ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಭಟ್ಕಳ ಕೆ ಬಿ ರೋಡ್ ನಾಗುಮನೆ ನಿವಾಸಿ ಗಣೇಶ (31) ಸಾವಿಗೀಡಾದ ದುದ್ರ್ಯೆವಿ. ಹಿಂಬದಿ ಸವಾರೆ ಗಣೇಶ್ ಅವರ ತಾಯಿ ದುರ್ಗಿ ಅವರು ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಗಣೇಶ ಭಟ್ಕಳದಿಂದ ಪಡುಕೋಣೆಯ ತಮ್ಮ ತಾಯಿ ಮನೆಗೆ ಮದುವೆಯ ಆಮಂತ್ರಣ ನೀಡಲು ತೆರಳುತ್ತಿದ್ದಾಗ ಶಾಲೆಬಾಗಿಲು ಸಮೀಪ ಕಾರು ಬೈಕಿಗೆ ಡಿಕ್ಕಿ ಹೊಡೆದಿದೆ. ತಲೆ ರಸ್ತೆಗೆ ಬಡಿದು ಗಂಭೀರ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಿಸುವ ಮುನ್ನವೇ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾರೆ.

ವಿದೇಶದಲ್ಲಿ  ಉದ್ಯೋಗಿಯಾಗಿದ್ದ ಇವರ ಮದುವೆ ಏಪ್ರಿಲ್ 28ರ ಶುಕ್ರವಾರದಂದು ನಾಗೂರು ಶಾಂತೇರಿ ಕಾಮಾಕ್ಷಿ ಕಲ್ಯಾಣ ಮಂಟಪದಲ್ಲಿ  ನಿಶ್ಚಯವಾಗಿತ್ತು. ಈ ಹಿನ್ನೆಲೆಯಲ್ಲಿ ಊರಿಗೆ  ಬಂದಿದ್ದ ಗಣೇಶ್ ಅವರು ತಮ್ಮ ತಾಯಿ ಜೊತೆಗೆ ಸಂಬಂಧಿಕರ ಮನೆಗೆ ಹಾಗೂ ಮೂಲ ಮನೆ ಪಡುಕೋಣೆಯಲ್ಲಿರುವ ಸಂಬಂಧಿಕರಿಗೆ ಆಹ್ವಾನ ಪತ್ರಿಕೆ ನೀಡಲು ಹೊರಟಿದ್ದರು. ಆರೋಪಿ ಕಾರು ಚಾಲಕ ಪರಾರಿಯಾಗಿದ್ದಾನೆ.