ವಿವಾಹವಾಗಲಿದ್ದ ವಧು ಆತ್ಮಹತ್ಯೆ ಬೆನ್ನಲ್ಲೇ ವರನೂ ಆತ್ಮಹತ್ಯೆ

ಮೃತ ಚಂದ್ರಶೇಖರ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ವಿವಾಹಕ್ಕೆ ಐದು ದಿನ ಇರುವಾಗ ವಧು ಆತ್ಮಹತ್ಯೆಗೈದುದರ ಬೆನ್ನಲ್ಲೇ ವರನೂ ಆತ್ಮಹತ್ಯೆಗೈದಿದ್ದಾನೆ.

ಅರಮಂಗಾನ ಉಲೂಜಿ ಹೌಸ್ ವೆಂಕಟ್ರಮಣ ಎಂಬವರ ಪುತ್ರ, ಕಾಸರಗೋಡು ಕೆ ಎಸ್ ಆರ್ಟಿ ಸಿ ಬಸ್ ನಿಲ್ದಾಣದಲ್ಲಿ ಬೇಕರಿ ವ್ಯಾಪಾರಿಯಾದ ಚಂದ್ರಶೇಖರ (37) ಆತ್ಮಹತ್ಯೆಗೈದ ಯುವಕ. ಇವರ ಮೃತದೇಹ ಚಳಿಯಂಗೋಡು ಬಳಿ ಜಾಹೀರಾತು ಬೋರ್ಡಿನಲ್ಲಿ ನೇಣು ಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಕಂಡುಬಂದಿದೆ.

ಚಂದ್ರಶೇಖರ ಹಾಗೂ ಮಂಗಳೂರು ನಾಗುರಿ ನಿವಾಸಿ ಕೃಷ್ಣ ಎಂಬವರ ಪುತ್ರಿ ನಂದಿತಾ ವಿವಾಹ ಫೆ 13ರಂದು ನಡೆಸಲು ನಿರ್ಧರಿಸಲಾಗಿತ್ತು. ಆದರೆ ಫೆ 8ರಂದು ಯುವತಿ ನೇಣುಬಿಗಿದು ಆತ್ಮಹತ್ಯೆಗೈದಿದ್ದಳು. ಈಕೆಯ ಸಾವಿಗೆ ಕಾರಣ  ಚಂದ್ರಶೇಖರನಾಗಿದ್ದಾನೆಂದು ಸುದ್ದಿ ಹರಡಿದ್ದು, ಅದರ ವಿರುದ್ಧ ಚಂದ್ರಶೇಖರ ಪೆÇಲೀಸಧಿಕಾರಿಗಳಿಗೆ ದೂರು ನೀಡಿದ್ದರು. ರಾತ್ರಿ ಮನೆಯಲ್ಲಿ ಆಹಾರ ಸೇವಿಸಿದ ಬಳಿಕ ಚಂದ್ರಶೇಖರ ಹೊರಗೆ ತೆರಳಿದ್ದು, ಮರಳದ ಹಿನ್ನೆಲೆಯಲ್ಲಿ ಹುಡುಕಾಟ ನಡೆಸಿದಾಗ ಮೃತದೇಹ ಪತ್ತೆಯಾಗಿದೆ. ಮೃತದೇಹವನ್ನು ಪೆÇಲೀಸರು ಜನರಲ್ ಆಸ್ಪತ್ರೆ ಶವಾಗಾರಕ್ಕೆ ತಲುಪಿಸಿದ್ದಾರೆ.