ಬಾಲಕಿ ಅತ್ಯಾಚಾರಗೈದ ಪೊಲೀಸ್ ಪೇದೆಗೆ ಧರ್ಮದೇಟು ; ಬಂಧನ

ಗ್ರೇಟರ್ ನೋಯ್ಡಾ : ಇಲ್ಲಿನ ಏಳು ವರ್ಷದ ಬಾಲಕಿಯೊಬ್ಬಳನ್ನು ಅಪಹರಿಸಿ, ಅತ್ಯಾಚಾರಗೈದ ಪೊಲೀಸ್ ಪೇದೆಯೊಬ್ಬನಿಗೆ ಉದ್ರಿಕ್ತ ಗುಂಪು ಥಳಿಸಿ, ಪೊಲೀಸರಿಗೊಪ್ಪಿಸಿದೆ. ಆರÉೂೀಪಿ ಪೊಲೀಸ್ ಪೇದೆ ಸುಭಾಷ್ ಸಿಂಗ್ (45) ಎಂಬವ ಗೌತಮ ಬುದ್ಧ ನಗರದಲ್ಲಿ ಮಾರಾಟ ತೆರಿಗೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾನೆ. ಸಾರ್ವಜನಿಕರು ಹಸ್ತಾಂತರ ಮಾಡಿರುವ ಈತನ ವಿರುದ್ಧ ಪೋಕ್ಸೋ ಕಾಯ್ದೆ ಹೇರಲಾಗಿದೆ. ಈ ಕಾಯ್ದೆಯಲ್ಲಿ ಆರೋಪಿಗೆ 10 ವರ್ಷ ಜೈಲು ಶಿಕ್ಷೆ ಲಭಿಸಲಿದೆ ಎಂದು ಪೊಲೀಸರು ತಿಳಿಸಿದರು.

LEAVE A REPLY