ವಿವೇಕಾನಂದರ ಭವ್ಯ ಚಿಂತನೆ

ಆಳಾಗುವುದನ್ನು ಮೊದಲು ಕಲಿಯಿರಿ. ಆಗ ನಾಯಕನ ಅರ್ಹತೆ ನಿಮಗೆ ಬರುವುದು. ಹಿಂತಿರುಗಿ ನೋಡಬೇಡಿ. ಮುನ್ನುಗ್ಗಿ ಮುಂದೆ ನಡೆಯಿರಿ. ನಿಮ್ಮನ್ನೇ ನೀವು ಜಯಿಸಿ. ಆಗ ಇಡೀ ಜಗತ್ತೇ ನಿಮ್ಮದಾಗುವುದು. ಸಾಧ್ಯವಾದರೆ ನೀವು ಉಪಕಾರ ಮಾಡಿ. ಇಲ್ಲದಿದ್ದರೇ ಸುಮ್ಮನೇ ಇರಿ. ಉಪದ್ರವ ಮಾಡಬೇಡಿ. ಇದೇನಿದು ಎಂದು ಯೋಚಿಸುತ್ತಿದ್ದೀರಾ   ಇದೇ ವೀರ ಸನ್ಯಾಸಿ ವಿವೇಕಾನಂದರ ನುಡಿಮುತ್ತುಗಳು  ಇದು ಇಂದಿನ ಯುವಜನತೆ ಪಾಲಿಸಿದರೇ ಜೀವನ ಪಾವನ. ಅಬ್ಬಾ ಎಂತಹ ನುಡಿಮುತ್ತುಗಳು  ವಿವೇಕಾನಂದರ ದೇಶಪ್ರೇಮವೇ ಬಹಳ ಮಹತ್ತರವಾದದ್ದು. ನಮ್ಮ ಭಾರತದ ಹೆಮ್ಮೆಯ ವೀರ ಪುತ್ರನಿಗೆ ಸಾಷ್ಟಾಂಗ ನಮನಗಳು.

  • ಬಿ ಆರ್ ಕೌಶಿಕ್  ಪುತ್ತೂರು