ಮಂಜೇಶ್ವರ ಬ್ಲಾಕ್ ಅಭಿವೃದ್ಧಿ ಯೋಜನೆ ಕುರಿತು ಗ್ರಾಮಸಭೆ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಗ್ರಾಮಗಳ ಅಭಿವೃದ್ಧಿಗಾಗಿ ಮಂಜೇಶ್ವರ ಬ್ಲಾಕ್ ಪಂಚಾಯತಿಯಲ್ಲಿ ಅಧೀನದಲ್ಲಿರುವ 7 ಗ್ರಾ ಪಂ.ಗಳ ಗ್ರಾಮ ಸದಸ್ಯರ ಸಭೆ ನಡೆಯಿತು.

ಪಂಚವಾರ್ಷಿಕ ಅಭಿವೃದ್ಧಿ ಯೋಜನೆಗಳ ಬಗ್ಗೆ ಚರ್ಚೆ ನಡೆಸಲಾಯಿತು. 7 ಗ್ರಾ ಪಂ.ಗಳು ಮಾಡಬೇಕಾದ ಅಭಿವೃದ್ಧಿ ಕುರಿತು ಚರ್ಚಿಸಿ ಅದಕ್ಕೆ ಬೇಕಾದ ರೂಪುರೇಷೆ ತಯಾರಿಸಲು ತೀರ್ಮಾನಿಸಲಾಯಿತು. ಮೇ 23ರಂದು ನಡೆಯಲಿರುವ ಸೆಮಿನಾರಿನಲ್ಲಿ ಇದರ ಕರಡುಪ್ರತಿಯನ್ನು ಪ್ರಕಟಿಸಲು ತೀರ್ಮಾನವಾಯಿತು. ಸೆಮಿನಾರಿನಲ್ಲಿ ಹಲವಾರು ಮಂದಿ ಭಾಗಿಯಾದರು. ಬ್ಲಾಕ್ ಪಂಚಾಯತ ಅಧ್ಯಕ್ಷ ಸೇರಿದಂತೆ ಇತರ ಪಂಚಾಯತಗಳ ಅಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು.