ಅಕ್ರಮ ಬೋರ್ವೆಲ್ಲಿಗೆ ತಡೆ

ಪುತ್ತೂರು : ಪರವಾನಿಗೆ ಇಲ್ಲದೆ ಅಕ್ರಮವಾಗಿ ಕೊರೆಯುತ್ತಿದ್ದ ಬೋರ್ವೆಲ್ ಕಾಮಗಾರಿಗೆ ಗ್ರಾ ಪಂ ಹಾಗೂ ಕಂದಾಯ ಅಧಿಕಾರಿಗಳು ತಡೆ ನೀಡಿದ್ದಾರೆ.

ಕುರಿಯ ಗ್ರಾಮದ ದೇವಸ್ಥಾನದವೊಂದರ ಬಳಿ ರಾತ್ರಿ ವೇಳೆ ಖಾಸಗಿ ವ್ಯಕ್ತಿಯೋರ್ವರು ಪರವಾನಿಗೆ ಇಲ್ಲದೆ ಬೋರ್ವೆಲ್ ತೆಗೆಯುತ್ತಿದ್ದರು. ಇದರ ವಿರುದ್ದ ಗುಣಪಾಲ ಗೌಡ, ಉಮೇಶ್ ಮತ್ತು ಕುಂಞಣ್ಣ ಎಂಬವರು ಆರ್ಯಾಪು ಗ್ರಾಪಂ ಮತ್ತು ಕಂದಾಯ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.