ಡುಪ್ಲಿಕೇಟ್ ಮನೆನಂಬ್ರ ನೀಡಿಕೆಯಲ್ಲಿ ಪಂಚಾಯತ್ ಸದಸ್ಯರು ಸಿಬ್ಬಂದಿ

ಕುತ್ತೆತ್ತೂರು ಪೆರ್ಮುದೆ ಗ್ರಾಮಗಳಲ್ಲಿ ಸರಕಾರ ಎಂ ಆರ್ ಪಿ ಎಲ್ ವಿಶೇಷ ಆರ್ಥಿಕ ವಲಯ ಮಾಡುವುದಕ್ಕೋಸ್ಕರ ನೂರಾರು ಎಕರೆ ಜಾಗ ಸ್ವಾಧೀನ ಮಾಡಿಕೊಳ್ಳಲು ಮುಂದಾಗಿರುವ ಹಿನ್ನೆಲೆಲಯಲ್ಲಿ ಸರಕಾರದಿಂದ ಪರಿಹಾರ ಮೊತ್ತ ಪಡೆಯಲು ದೊಡ್ಡ ಷಡ್ಯಂತ್ರವೇ ನಡೆಯುತ್ತಿದೆ. ಕೆಲವು ವರ್ಷಗಳ ಹಿಂದೆಯೇ ಅನೇಕರು ಡೂಪ್ಲಿಕೇಟ್ ಮನೆ ನಂಬ್ರ ಪಡೆದಿದ್ದು, ದಂಧೆಯಲ್ಲಿ ಪಂಚಾಯತ್ ಸದಸ್ಯರು, ಸಿಬ್ಬಂದಿಗಳು ಭಾಗಿಯಾಗಿದ್ದಾರೆ. ಪ್ರತೀ ಮನೆ ನಂಬ್ರ ಮಾಡಿಕೊಡಲು 50 ಸಾವಿರದಿಂದ ಒಂದು ಲಕ್ಷ ರೂಪಾಯಿತನಕ ಲಂಚ ಪಡೆಯುತ್ತಿರುವುದು ಬಹಿರಂಗಗೊಂಡಿದೆ. ಎರಡ್ಮೂರು ಸೆಂಟ್ಸ್ ಜಾಗದಲ್ಲಿ ಎರಡ್ಮೂರು ಮನೆ ನಂಬ್ರ ಪಡೆದಿದ್ದು ಸರಕಾರದ ಸವಲತ್ತು ಗಿಟ್ಟಿಸಲು ಹೊಂಚು ಹಾಕುತ್ತಿದ್ದಾರೆ.
ಸುತ್ತಮುತ್ತ ಗ್ರಾಮಸ್ಥರು ಕೂಡಾ ತಮ್ಮ ಹೆಸರಿನಲ್ಲಿ, ಸಂಬಂಧಿಕರ ಹೆಸರುಗಳಲ್ಲಿ ನಾಲ್ಕೈದು ಮನೆ ನಂಬ್ರಗಳನ್ನು ಪಡೆದಿದ್ದು, ಮನೆ ನಂಬ್ರದ ತಾರೀಕನ್ನು ಹಿಂದಿನ ದಿನಾಂಕಕ್ಕೆ ಅಡ್ಜೆಸ್ಟ್ ಮಾಡಿಕೊಟ್ಟಿರುತ್ತಾರೆ. ಇದೀಗ ಊರಿನವರಿಗೆ ಈ ವಿಷಯ ಎಲ್ಲರಿಗೂ ತಿಳಿದಿದೆ. ಇಂತಹ ವ್ಯಕ್ತಿಗಳೇ ಜಾಗ ಸ್ವಾಧೀನಪಡಿಸಲು ಬೆಂಬಲ ನೀಡುತ್ತಿದ್ದಾರೆ. ಸರಕಾರ ಈ ಅಕ್ರಮ ಮನೆ ನಂಬ್ರ ದಂಧೆಯ ತನಿಖೆ ಕೈಗೆತ್ತಿಕೊಂಡು ಒಂದು ಮನೆಯಲ್ಲಿರುವ ಐದಾರು ಪೋರ್ಜರಿ ಡೋರ್ ನಂಬ್ರಗಳನ್ನು ಪರಿಶೀಲಿಸಿ ರದ್ದು ಮಾಡಬೇಕೆಂದು ಪ್ರಜ್ಞಾವಂತ ನಾಗರಿಕರ ಆಗ್ರಹ

  • ಎಂ ಸುರೇಶ್ ಶೆಟ್ಟಿ
    ಕುತ್ತೆತ್ತೂರು ಪೆರ್ಮುದೆ