ಯುವತಿಗೆ ಮಗು ಕರುಣಿಸಿ ಊರುಬಿಟ್ಟ ಗ್ರಾ ಪಂ ಸದಸ್ಯ

ಕಾರ್ಕಳ : ಗ್ರಾಮ ಪಂಚಾಯತ್ ಸದಸ್ಯನೊಬ್ಬ ತಾನು ಪ್ರೀತಿಸುತ್ತಿದ್ದ ಯುವತಿಯ ಜತೆಗೆ ಪ್ರಣಯದಾಟವಾಡಿ ಆಕೆಗೆ ಮಗು ಕರುಣಿಸಿದ ಬಳಿಕ ಪರಾರಿಯಾದ ಘಟನೆ ನಡೆದಿದೆ.

ವೃತ್ತಿಯಲ್ಲಿ ರಿಕ್ಷಾ ಚಾಲಕನಾಗಿರುವ ಈತ ಕಳೆದ ಕೆಲ ವರ್ಷಗಳಿಂದ ಬೈಲೂರಿನ ಯುವತಿಯನ್ನು ಪ್ರೀತಿಸುತ್ತಿದ್ದು ಈಕೆಯೊಂದಿಗೆ ಸಾಕಷ್ಟು ಸುತ್ತಾಡಿದ್ದ ಎನ್ನಲಾಗಿದೆ.  ಮದುವೆಯಾಗುವುದಾಗಿ ನಂಬಿಸಿ ಆಕೆಯೊಂದಿಗೆ ಹಲವು ಬಾರಿ ದೈಹಿಕ ಸಂಪರ್ಕ ಬೆಳೆಸಿದ್ದ ಎಂದು ಆರೋಪಿಸಲಾಗಿದೆ. ಇತ್ತ ಯುವತಿ ಗರ್ಭಿಣಿಯಾಗುತ್ತಿದ್ದಂತೆಯೇ ಆತ ಆಕೆಗೆ ಗರ್ಭ ತೆಗೆಸುವಂತೆ ಆತ ಒತ್ತಡ ಹೇರಿದ್ದರೂ ಯುವತಿ ಒತ್ತಡಕ್ಕೆ ಮಣಿಯದೇ ಮದುವೆಯಾಗುವಂತೆ ಒತ್ತಾಯಿಸುತ್ತಿದ್ದಳು. ಇದೀಗ ಮಗುವಿಗೆ ಜನ್ಮ ನೀಡಿದ್ದಾಳೆ.

ಈ ಪ್ರಕರಣದ ಕುರಿತು ಕಾರ್ಕಳ ಪೊಲೀಸರನ್ನು ಕೇಳಿದರೆ ಗ್ರಾಮ ಪಂಚಾಯತ್ ಸದಸ್ಯ ಯುವತಿಗೆ ಮೋಸ ಮಾಡಿದ್ದಾನೆ ಎನ್ನುವ ಆರೋಪವಿದೆ ಎಂದು ತಿಳಿಸಿದ್ದಾರೆ. ಮೂಲಗಳ ಪ್ರಕಾರ ಆತ ಮುಂಬಯಿಗೆ ಪರಾರಿಯಾಗಿದ್ದಾನೆ ಎನ್ನಲಾಗಿದೆ.