ದೇವೇಗೌಡರಿಂದ ರಾಷ್ಟ್ರಪತಿ ಭೇಟಿ

ಬೆಂಗಳೂರು : ಮಂಗಳವಾರ ರಾತ್ರಿ ರಾಜಭವನದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದರನ್ನು ಭೇಟಿಯಾದ ಜೆಡಿಎಸ್ ವರಿಷ್ಠ ದೇವೇಗೌಡ ಕರ್ನಾಟಕ ಹೈಕೋರ್ಟಿಗೆ ತ್ವರಿತವಾಗಿ ಜಡ್ಜುಗಳ ನೇಮಕಾತಿ ಮಾಡುವಂತೆ ಆಗ್ರಹಿಸಿದರು. ರಾಜ್ಯದಲ್ಲಿ ಇದೇ ವಿಷಯವಾಗಿ ಪ್ರತಿಭಟನೆ ನಡೆಸುತ್ತಿದ್ದ ವಕೀಲರನ್ನು ಮೊನ್ನೆ ಭೇಟಿಯಾಗಿದ್ದ ದೇವೇಗೌಡ, ತಾನು ಪ್ರಧಾನಿ ಮತ್ತು ರಾಷ್ಟ್ರಪತಿಯವರಿಗೆ ಈ ವಿಷಯ ತಿಳಿಸಿ, ಪರಿಹಾರಕ್ಕೆ ಪ್ರಯತ್ನಿಸುವೆ ಎಂದು ಭರವಸೆ ನೀಡಿದ್ದರು. ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರ ಕಾಲದಿಂದಲೇ ಗೌಡರು ಕೋವಿಂದರನ್ನು ಬಲ್ಲವರು. “ಅವರು ನನ್ನ ಉತ್ತಮ ಗೆಳೆಯ. ನನ್ನ ಬಗ್ಗೆ ಅವರಲ್ಲಿ ಉತ್ತಮ ಅಭಿಪ್ರಾಯವಿದೆ. ಅವರು ನನ್ನ ಬೇಡಿಕೆ ಪೂರೈಸುವರೆಂಬ ಭರವಸೆ ನನಗಿದೆ” ಎಂದರು ಮಾಜಿ ಪ್ರಧಾನಿ ಹೇಳಿದರು.

LEAVE A REPLY