ಕರಾವಳಿಯ ಬೇಡಿಕೆಗಳ ಪರಿಗಣಿಸಲಿರುವ ರಾಜ್ಯ ಸರಕಾರದ ಮರಳು ನೀತಿ

  ಬೆಂಗಳೂರು : ತಮಗೆ ಮರಳು ಕಡಿಮೆ ದರಗಳಲ್ಲಿ ಲಭ್ಯಗೊಳಿಸಬೇಕು ಹಾಗೂ ಸ್ಥಳೀಯ ಬೇಡಿಕೆ ಪೂರೈಸಿದ ನಂತರವಷ್ಟೇ ಇತರ ಜಿಲ್ಲೆಗಳಿಗೆ ಮರಳು ಸಾಗಾಟ ಮಾಡಲು ಅನುಮತಿಸಬೇಕೆಂದು ಕೋರಿ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಜನರು ಮಾಡಿರುವ ಮನವಿಯನ್ನು ಗಮನದಲ್ಲಿರಿಸಿಕೊಂಡು ಹೊಸ ಮರಳು ನೀತಿಯನ್ನು ರಾಜ್ಯ ಸರಕಾರ  ಹೊರತರಲಿದೆ ಎಂದು ಕಾನೂನು ಸಚಿವ ಟಿ ಬಿ ಜಯಚಂದ್ರ ಹೇಳಿದ್ದಾರೆ.

ಹೊಸ ಮರಳು ನೀತಿಯನ್ನು ಅಂತಿಮಗೊಳಿಸುವ ಮೊದಲು ಈ ವಿಚಾರವನ್ನು ರಾಜ್ಯ ಸಚಿವ ಸಂಪುಟದಲ್ಲಿ ಚರ್ಚಿಸಲಾಗುವುದು ಎಂದು ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ  ಸಚಿವರು ತಿಳಿಸಿದರು.

ರಾಜ್ಯದಲ್ಲಿ ಮರಳಿನ ತೀವ್ರ  ಕೊರತೆ ಉಂಟಾಗಿರುವುದರಿಂದ  ಇತರ ರಾಜ್ಯಗಳಿಂದ ಮರಳು ಖರೀದಿಸುವ ಬಗ್ಗೆಯೂ  ಯೋಚಿಸಲಾಗುತ್ತಿದೆ. ಮಹಾರಾಷ್ಟ್ರ ಕೂಡ ಇತರ ರಾಜ್ಯಗಳಿಂದ ಮರಳು ಆಮದು ಮಾಡುತ್ತಿದೆ ಎಂದು ಜಯಚಂದ್ರ ಹೇಳಿದರು.

ಅಕ್ರಮ ಮರಳುಗಾರಿಕೆಯಲ್ಲಿ  ಶಾಮೀಲಾಗಿರುವ ವ್ಯಕ್ತಿಗಳಿಂದ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಮತ್ತು ಉಪವಿಭಾಗಾಧಿಕಾರಿ ಶಿಲ್ಪಾ ನಾಗ್  ಮೇಲೆ ನಡೆದ ದಾಳಿಯ ಬಗ್ಗೆ ಸಚಿವ ಸಂಪುಟ ಉಪಸಮಿತಿ ಚರ್ಚಿಸಿದೆ ಎಂದರು