ಕೈಗೆಟುಕವ ದರದಲ್ಲಿ ಸರಕಾರದಿಂದ ಹೋಮ್ ಸ್ಟೇ ಪ್ರವಾಸೋದ್ಯಮ

ನಮ್ಮ ಪ್ರತಿನಿಧಿ ವರದಿ
ಕಾಸರಗೋಡು : ವರ್ಷದಲ್ಲಿ ಸರಿಸುಮಾರು ಮೂರು ಲಕ್ಷ ಮಂದಿಯನ್ನು ಆಕರ್ಷಿಸುತ್ತಿರುವ ಬೇಕಲ ಕೋಟೆ ಪ್ರವಾಸ ತಾಣದಲ್ಲಿ ಕೈಗೆಟಕುವ ದರದಲ್ಲಿ ಸರಕಾರ ಹೋಮ್ ಸ್ಟೇ ಉದ್ಯಮ ಆರಂಭಿಸಲು ಚಿಂತನೆ ನಡೆಸಿದೆ  ಕಲ್ಲಿಕೋಟೆಯ ವಡಗರದಿಂದ ಕಾಸರಗೋಡಿನ ಮಂಜೇಶ್ವರದವರೆಗೆ ಸುಮಾರು 2,000 ಹೋಮ್ ಸ್ಟೇಗಳ ಅಗತ್ಯವಿದೆ
ದೇಶ  ವಿದೇಶಗಳ ಪ್ರವಾಸಿಗರನ್ನು ಆಕರ್ಷಿಸಲು ಸುಂದರ ಸಮುದ್ರ ತೀರ ಪ್ರದೇಶ  ಹಿನ್ನೀರು  ನೈಸರ್ಗಿಕ ತಾಣಗಳು  ಐತಿಹಾಸಿಕ ಮಹತ್ವವುಳ್ಳ ಕೋಟೆ  ಬತ್ತೇರಿಗಳಿರುವ ಉತ್ತರ ಮುಲಬಾರಿನ ಕಾಸರಗೋಡು  ಕಣ್ಣೂರು  ಕಲ್ಲಿಕೋಟೆ ಜಿಲ್ಲೆಗಳಲ್ಲಿ ಪ್ರವಾಸಿಗರ ಅಗತ್ಯತೆಗಳಲ್ಲಿ ಒಂದಾದ ಆಶ್ರಯ ತಂಗು ನಿವಾಸಗಳಾದ ಹೋಮ್ ಸ್ಟೇಗಳ ಅವಶ್ಯಕತೆಯಿದೆ  ಈ ನಿಟ್ಟಿನಲ್ಲಿ ಕೇರಳ ಪ್ರವಾಸೋದ್ಯಮ ಇಲಾಖೆ ವಿದ್ಯಾವಂತ ಮಹಿಳೆಯರನ್ನು ಹೋಮ್ ಸ್ಟೇ ನಿರ್ಮಾಣಕ್ಕೆ ಉತ್ತೇಜಿಸುತ್ತಿದೆ
ಐತಿಹಾಸಿಕ ಕಾಸರಗೋಡು ಜಿಲ್ಲೆಯಲ್ಲಿ ಪೆಸಡಿಗುಂಪೆ  ರಾಣಿಪುರಂ ಸಹಿತ ಹಲವು ಬೀಚುಗಳು  ಚರಿತ್ರೆಯುಳ್ಳ ಹಲವು ಕೋಟೆಗಳಿವೆ ಕೈಗೆಟಕುವ ದರದಲ್ಲಿ ಸುಸಜ್ಜಿತ ಹೋಂ ಸ್ಟೇಗಳಿಲ್ಲದಿರುವುದು ಪ್ರವಾಸಿಗರ ನಿಲುವಿಕೆಗೆ ಮುಳುವಾಗಿದೆ  ಪ್ರಸ್ತುತ ಜಿಲ್ಲೆಯಲ್ಲಿ ಕೇವಲ 6 ಹೋಂ ಸ್ಟೇಗಳು ಮಾತ್ರವಿದ್ದು, ಸಮೀಪದ ಕಣ್ಣೂರು ಜಿಲ್ಲೆಯಲ್ಲಿ 15 ಹೋಂ ಸ್ಟೇಗಳು ಕಾರ್ಯನಿರತವಾಗಿದೆ
ಪರಿಸರ ಸ್ನೇಹಿ ಪ್ರವಾಸೋದ್ಯಮಕ್ಕೆ ಒತ್ತು ನೀಡುತ್ತಿರುವ ಬಿಆರ್ಡಿಸಿ ಸಂಸ್ಥೆಯು ವರ್ಷಕ್ಕೆ 3 ಲಕ್ಷ ಮಂದಿಯನ್ನು ಬೇಕಲಕ್ಕೆ ಆಕರ್ಷಿಸುತ್ತಿದೆ ಇದರಲ್ಲಿ ಹೆಚ್ಚಿನವರು ಪ್ರವಾಸಿಗರಲ್ಲದೆ  ಕೋಟೆ ವೀಕ್ಷಕರೆನಿಸಿ ಹಿಂತಿರುಗುತ್ತಾರೆ  ಇವರ್ಯಾರು ಜಿಲ್ಲೆಯ ಇತರ ಪ್ರವಾಸೀ ತಾಣಗಳನ್ನು ಸಂದರ್ಶಿಸುವುದಿಲ್ಲ  ಬೇಕಲದಲ್ಲಿ ಐಷಾರಾಮಿ ಹೋಟೆಲುಗಳಿದ್ದು  ಐದು ಹೊಸ ಹೋಟೆಲುಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ. ಮಧ್ಯಮ ವರ್ಗದ ಪ್ರವಾಸಿಗರು ಇಂತಹ ವಿಲಾಸಿ ಹೋಟೆಲುಗಳಲ್ಲಿ ತಂಗದೆ ಹಿಂತಿರುಗುತ್ತಾರೆ  ಸರಕಾರದ ಹೊಸ ಪ್ರವಾಸಿ ನೀತಿ ಪ್ರವಾಸೋದ್ಯಮಕ್ಕೆ ಧನಾತ್ಮಕವಾಗಿ ಪರಿಣಮಿಸಲಿದೆ  ರಾಜ್ಯ ಸರಕಾರದ ಪ್ರವಾಸೋದ್ಯಮ ನೀತಿಯಿಂದ ಹೊಸ ಯೋಜನೆಗಳಿಗೆ ಚಾಲನೆ ಹಾಗೂ ಪುಷ್ಠಿ ಸಿಗಲಿದೆ ಎನ್ನುತ್ತಾರೆ ಪ್ರವಾಸೋದ್ಯಮ ಇಲಾಖೆ ಸಚಿವ ಕಡಕಂಪಳ್ಳಿ ಸುರೇಂದ್ರನ್