ರಾಜ್ಯಪಾಲ ಮರಳಿಸಿದ ಲೋಕಾ ಕಡತ ಎಜಿಗೆ ಕಳಿಸಿದ ಸಿದ್ದು ಸರಕಾರ

ಬೆಂಗಳೂರು : ಲೋಕಾಯುಕ್ತ ಹುದ್ದೆಗೆ ಜಸ್ಟಿಸ್ ಪಿ ವಿಶ್ವನಾಥ ಶೆಟ್ಟಿ ಅವರ ಹೆಸರನ್ನು ಶಿಫಾರಸುಗೊಳಿಸಿ ರಾಜ್ಯ ಸರಕಾರ ಕಳುಹಿಸಿದ್ದ ಕಡತವನ್ನು ರಾಜ್ಯಪಾಲ ವಜುಭಾಯಿ ವಾಲಾ ಅದನ್ನು ಮರುಪರಿಶೀಲಿಸುವಂತೆ ತಿಳಿಸಿ ಹಿಂದಿರುಗಿಸಿದ್ದರೆ ಇದೀಗ ಆ ಕಡತವನ್ನು ಸರಕಾರ ಅಡ್ವಕೇಟ್ ಜನರಲ್ ಬಳಿ ಕಳುಹಿಸಿ ಅವರಿಂದ ಕಾನೂನು ಸಲಹೆ ಕೇಳಿದೆ.

ಭೂಮಿ ಖರೀದಿ ಸಂಬಂಧ ನಿಯಮಗಳನ್ನು ಉಲ್ಲಂಘಿಸಿದ್ದಾರೆಂದು ಜಸ್ಟಿಸ್ ಶೆಟ್ಟಿ ವಿರುದ್ಧ ಇರುವ ದೂರುಗಳನ್ನು ಪರಿಗಣಿಸಿ ರಾಜ್ಯಪಾಲರು ಕಡತವನ್ನು ಸರಕಾರಕ್ಕೆ ಹಿಂದಿರುಗಿಸಿದ್ದರು.

ರಾಜ್ಯಪಾಲರು ಕೇಳಿರುವ ಎಲ್ಲಾ ಸ್ಪಷ್ಟೀಕರಣಗಳನ್ನು ಸರಕಾರ ಒದಗಿಸುವುದು ಎಂದು ಹೇಳಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ಹಂತದಲ್ಲಿ ಲೋಕಾಯುಕ್ತ ಹುದ್ದೆಗೆ ಬೇರೊಂದು ಹೆಸರನ್ನು ಸೂಚಿಸುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.