ಸರಕಾರಿ ಕಚೇರಿ ಅಧಿಕಾರಿಗಳು ಮಾಡೋ ತಪ್ಪುಗಳು ನೂರಾರು

ಸರಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ಮಾಡೋ ತಪ್ಪು ಒಂದಾ ಎರಡಾ ನೂರಾರು ಅಧಿಕಾರಿಗಳು ಮಾಡುವ ತಪ್ಪುಗಳಿಂದ ಸಾರ್ವಜನಿಕರು ಪಡುತ್ತಿರುವ ತಾಪತ್ರಯಗಳೂ ಕಡಿಮೆಯೇನೂ ಇಲ್ಲ ಸಾರ್ವಜನಿಕರು ಯಾವುದೇ ದಾಖಲಾತಿಗಳನ್ನು ಸರಕಾರಿ ಕಚೇರಿ ವಿಶ್ವ ವಿದ್ಯಾನಿಲಯಗಳಿಂದ ಪಡೆಯಬೇಕಾದರೆ ಸಂಬಂಧಿಸಿದ ಪೂರಕವಾದ ಪುರಾವೆಗಳು ಒದಗಿಸಲಾಗಿರುತ್ತದೆ ಆದರೂ ಸರಕಾರಿ ಕಚೇರಿಗಳಲ್ಲಿ ದಾಖಲಾತಿ ಒದಗಿಸುವವರು ದಾಖಲಾತಿಗಳನ್ನು ಮುದ್ರಣ ಮಾಡುವಾಗ ತಪ್ಪಾಗಿಯೇ ಮುದ್ರಿಸಿರುತ್ತಾರೆ ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳು ಇಂತಹ ಸಮಸ್ಯೆ ಎದುರಿಸಬೇಕಾಗಿದೆ ಆಧಾರ್ ಜಾತಿ ಆದಾಯ ಚುನಾವಣಾ ಗುರುತಿನ ಚೀಟಿ ಅಂಕಪಟ್ಟಿ ಮತ್ತು ಇತ್ತೀಚಿನ ದಿನಗಳಲ್ಲಿ ವಿಶ್ವ ವಿದ್ಯಾನಿಲಯಗಳು ಅಂಕ ಪಟ್ಟಿಯಲ್ಲಿಯೂ ತಪ್ಪಕ್ಷರಗಳಿಂದ ಅಂಕ ಪಟ್ಟಿ ಪ್ರಕಟಿಸುವುದರಿಂದ ವಿದ್ಯಾರ್ಥಿಗಳು ಅಂಕಪಟ್ಟಿಗಳನ್ನು ತಿದ್ದುಪಡಿ ಮಾಡಲು ಪರಿತಪಿಸುತವಂತಂಹ ಸ್ಥಿತಿ ಬಂದಿರುವುದು ದುರಂತ

  • ಎಂ ಮನೋಹಕರ ಕೋಟ್ಯಾನ್  ಕಂಕನಾಡಿ