`ಎತ್ತಿನಹೊಳೆ ಯೋಜನೆಯ ಪರಿಣಾಮಗಳ ಬಗ್ಗೆ ಸರಕಾರಕ್ಕೆ ಯಾವುದೇ ಚಿಂತೆಯಿಲ್ಲ’

`ದಕ್ಷಿಣ ಕನ್ನಡದ ಬಹುತೇಕ ಶಾಸಕರಿಗೆ ಜನರ ಹಿತಕ್ಕಿಂತ ಹೆಚ್ಚಾಗಿ ಮುಖ್ಯಮಂತ್ರಿಗಳ ಓಲೈಕೆ ಹೆಚ್ಚು ಮಹತ್ವದ್ದಾಗಿದೆ’

ಎಸ ಜಿ ಮಯ್ಯ
ಎಸ ಜಿ ಮಯ್ಯ

ಎನ್ ಐ ಟಿ ಕೆ ಇಲ್ಲಿನ ಮಾಜಿ ಡೀನ್ ಹಾಗೂ ಜಲ ಸಂಪನ್ಮೂಲ ಇಂಜಿನಿಯರಿಂಗ್ ಪ್ರೊಫೆಸರ್ ಆಗಿರುವ  ಎಸ್ ಜಿ ಮಯ್ಯ ಅವರು ವಿವಾದಿತ ಎತ್ತಿನಹೊಳೆ ಯೋಜನೆಯ ಸಾಧಕ-ಬಾಧಕಗಳ ಬಗ್ಗೆ ಅಪಾರ ಜ್ಞಾನ ಹೊಂದಿದ್ದು ಈ ಬಗ್ಗೆ ಈಗಾಗಲೇ ಹಲವು ಸಭೆ, ವಿಚಾರಸಂಕಿರಣಗಳಲ್ಲಿ ತಮ್ಮ ವಾದ ಮಂಡಿಸಿ ಜನರಲ್ಲಿ ಯೋಜನೆ ವಿರುದ್ಧ ಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಯಾವುದೇ ರಾಜಕೀಯ  ಪಕ್ಷದೊಂದಿಗೆ  ಅವರು ತಮ್ಮನ್ನು ಗುರುತಿಸಿಕೊಂಡಿಲ್ಲ. ಎತ್ತಿನಹೊಳೆ ಯೋಜನೆಯನ್ನು ರಾಜ್ಯ ಸರಕಾರ ಕೈಬಿಡುವಂತೆ ಮಾಡುವುದೇ ಅವರ ಮುಖ್ಯ ಗುರಿಯಾಗಿದೆ. ಅವರೊಂದಿಗಿನ ಸಂದರ್ಶನದ ಆಯ್ದ ಭಾಗಗಳು :


  • ಮುಖ್ಯಮಂತ್ರಿಗಳು  ಇತ್ತೀಚೆಗೆ ಎತ್ತಿನಹೊಳೆ ಯೋಜನೆ ಬಗ್ಗೆ ಚರ್ಚಿಸಲು ಕರೆದಿದ್ದ ಸಭೆsÉಯಲ್ಲಿ ಏನು ನಡೆಯಿತೆಂದು ನೀವು ಹೇಳುವಿರಾ ?

ಯೋಜನಾ ವಿವರಗಳನ್ನು ಈಗಾಗಲೇ ಹಲವಾರು ಬಾರಿ ಕೇಳಿರುವ ಹೊರತಾಗಿಯೂ ಸಭೆಯಲ್ಲಿ ಭಾಗವಹಿಸಿದ್ದ ಕರಾವಳಿ ಭಾಗದ ಜನರ ವಿರೋಧದ ನಡುವೆಯೇ ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಯೊಬ್ಬರು ವಿವರಗಳನ್ನು ಪ್ರಸ್ತುತಪಡಿಸಿದರು. ವಿಧಾನ ಪರಿಷತ್ ಸದಸ್ಯ ಗಣೇಶ್ ಕಾರ್ಣಿಕ್ ಅವರು ನೀರಿನ ಲಭ್ಯತೆಯ ಬಗ್ಗೆ ಮಾಹಿತಿ ಕೇಳಿದರಲ್ಲದೆ ಈ ಬಗ್ಗೆ  ಸೂಕ್ತ ಲಿಖಿತ ಆಧಾರಗಳನ್ನು ಕೇಳಿದರೂ ಅದನ್ನು ಒದಗಿಸಲು ಅಧಿಕಾರಿಗಳಿಗೆ ಸಾಧ್ಯವಾಗಲಿಲ್ಲ. ಯೋಜನೆಯನ್ನು ಏಕೆ ವಿರೋಧಿಸಲಾಗುತ್ತಿದೆಯೆಂದು ವಿವರಿಸಲು ನನಗೆ ಹೇಳಿದಾಗ ರಾಷ್ಟ್ರೀಯ ಜಲ ನೀತಿ, ಇಐಎ ವರದಿ,  ಕರಾವಳಿ ಭಾಗದ ನೀರಿನ ಸಮಸ್ಯೆ, ನದಿ ನೀರಿನ ಹರಿವಿನ ಬಗ್ಗೆ ತಪ್ಪು ಮಾಹಿತಿ ಹಾಗೂ ಪಶ್ಚಿಮ ಘಟ್ಟಗಳ ಸೂಕ್ಷ್ಮತೆ ಹಾಗೂ ಇಂತಹ ಯೋಜನೆಗಳನ್ನು ತಾಳುವ ಸಾಮಥ್ರ್ಯ ಅದಕ್ಕಿದೆಯೇ ಎಂಬಿತ್ಯಾದಿ ವಿಚಾರಗನ್ನು ಎತ್ತಿದೆ. ಆದರೆ ಇವುಗಳ್ಯಾವುದಕ್ಕೂ  ನೀರಾವರಿ ನಿಗಮದ ಅಧಿಕಾರಿಗಳಿಂದ ಸಮಾಧಾನಕರ ಉತ್ತರ ದೊರೆತಿಲ್ಲ. ತರುವಾಯ ಸರಕಾರದ ನಿಲುವನ್ನು ಕಾಂಗ್ರೆಸ್ ಶಾಸಕರು  ಬೆಂಬಲಿಸಿದರು. ದುರದೃಷ್ಟವಶಾತ್  ದಕ್ಷಿಣ ಕನ್ನಡದ ಈ ಜನಪ್ರತಿನಿಧಿಗಳಿಗೆ ಜನರ ಹಿತಕ್ಕಿಂತ ಹೆಚ್ಚಾಗಿ ಮುಖ್ಯಮಂತ್ರಿಗÀಳ ಓಲೈಕೆ ಹೆಚ್ಚು ಮಹತ್ವದ್ದಾಗಿತ್ತು. ಸರಕಾರ ಈ ಯೋಜನೆಯನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿಗಳ ಘೋಷಣೆಯೊಂದಿಗೆ ಸಭೆ ಮುಕ್ತಾಯವಾಯಿತು.


  • ಸರಕಾರ ತನ್ನ ನಿಲುವನ್ನು ವಿವರಿಸಿತೇ ?

ಸರಕಾರಕ್ಕೆ ಈ ಯೋಜನೆಯ ಯಶಸ್ಸಿನ ಬಗ್ಗೆ ಯಾವುದೇ ಆಸಕ್ತಿಯಿಲ್ಲವೆಂಬುದು ಬಹಳಷ್ಟು ಸ್ಪಷ್ಟವಾಗಿದೆ.  ಅಧಿಕಾರಿಗಳು ಹೇಳಿದ್ದೇ ಅಂತಿಮ ಎಂಬ ಭಾವನೆಯಲ್ಲಿ ಸರಕಾರವಿದೆ. ವಿಸ್ತøತ ಯೋಜನಾ ವರದಿ ಯಾ ಯೋಜನೆಯ ಬಗ್ಗೆ ಯಾವುದೇ ಟೀಕೆ ಆಲಿಸಲು ಅದು ಸಿದ್ಧವಿಲ್ಲ. ಕರಾವಳಿಯ ನೀರಿನ ಸಮಸ್ಯೆಯ ಬಗ್ಗೆ ಕೇಳಲೂ ಅದಕ್ಕೆ ಮನಸ್ಸಿಲ್ಲ. ಈ ಯೋಜನೆಯಿಂದ ಪಶ್ಚಿಮ ಘಟ್ಟ ಹಾಗೂ ಮಳೆ ಪ್ರಮಾಣದ ಮೇಲೆ ಉಂಟಾಗುವ ಪರಿಣಾಮದ ಬಗ್ಗೆಯೂ ಸರಕಾರಕ್ಕೆ ಚಿಂತೆಯಿಲ್ಲ. ಈ ಯೋಜನೆಯನ್ನು ಮುಂದುವರಿಸಿಕೊಂಡು ಹೋಗಲು ಅದು ಹಠಕ್ಕೆ ಬಿದ್ದಿದೆ.


  • ನೀವು  ವಿಸ್ತøತ  ಯೋಜನಾ ವರದಿಯನ್ನು ಅಧ್ಯಯನ ನಡೆಸಿದ್ದೀರಾ ? ಅದರಲ್ಲಿ ಎದ್ದು ಕಾಣುವ ದೋಷಗಳ್ಯಾವುವು ?

ಯೋಜನೆ ಜಾರಿಯ ನಂತರ ಲಭ್ಯವಾಗುವ ನೀರಿನ ಅಂದಾಜು ಮಾಡಿರುವಲ್ಲಿಯೇ ದೊಡ್ಡ ತಪ್ಪಾಗಿದೆ.  ಇದೊಂದು ಕುಡಿಯುವ ನೀರಿನ ಯೋಜನೆಯಾಗಿದ್ದರೂ ವರದಿಯು  ನೀರಾವರಿ  ಲಾಭಗಳ ಬಗ್ಗೆ ಸಾಕಷ್ಟು ಚರ್ಚಿಸಿದೆ.


  • ಈ ಯೋಜನೆಯ ಬಗ್ಗೆ ನೀವು ನಡೆಸಿದ ಅಧ್ಯಯನ ಏನು ಹೇಳುತ್ತದೆ ?

ಯೋಜನೆಯ ನೀರಿನ ಲಭ್ಯತೆಯ ವಿಚಾರದಲ್ಲಿ ಶೇ 200ರಷ್ಟು ಉತ್ಪ್ರೇಕ್ಷಿಸಿ ಹೇಳಲಾಗಿದೆ. ಈ ಯೋಜನೆಯಿಂದ ಪಶ್ಚಿಮ ಘಟ್ಟಕ್ಕೆ ಭರಿಸಲಾಗದ ನಷ್ಟ ಉಂಟಾಗಲಿದೆ. ಈ ಯೋಜನೆಯಿಂದಾಗಿ ಮಳೆ ಕಡಿಮೆಯಾಗಿ ನದಿಯ ನೀರಿನ ಹರಿವು ಕೂಡ ಕಡಿಮೆಯಾಗುವುದು.


  • ಕೋಲಾರ ಮತ್ತು ಚಿಕ್ಕಬಳ್ಳಾಪುರ ಜನತೆಗೆ ಈ ಯೋಜನೆಯಿಂದ ನೀರು ದೊರೆಯುವುದೇ ?

ಇಲ್ಲ. ಈ ಭಾಗದ ಜನತೆಗೆ ಈ ಯೋಜನೆಯಲ್ಲಿ ಕೊನೆಯ ಆದ್ಯತೆ ನೀಡಲಾಗಿದೆ. ಯೋಜನೆಯಿಂದ 24 ಟಿಎಂಸಿ ನೀರು ದೊರೆಯಿತು ಎಂದಿಟ್ಟುಕೊಂಡೂ ಈ ಭಾಗದ ಜನರಿಗೆ ನೀರು ಲಭ್ಯವಾಗುವುದಿಲ್ಲ.


  • ಈ ಯೋಜನೆಗೆ ಪರ್ಯಾಯವಿದೆಯೇ ?

ಹೌದು. ಮೊದಲಾಗಿ ಈ ಯೋಜನೆ ಕೇವಲ ಕುಡಿಯುವ ನೀರು ಪೂರೈಕೆ ಉದ್ದೇಶ ಹೊಂದಿದೆಯೇ ಅಥವಾ ಇತರ ಉದ್ದೇಶಗಳನ್ನು ಹೊಂದಿದೆಯೇ ಎಂಬುದನ್ನು ಸ್ಪಷ್ಟಪಡಿಸಬೇಕು.  ಮೇಲಾಗಿ ಕರ್ನಾಟಕ ತನ್ನ ಕೆರೆಗಳಿಗೆ ಖ್ಯಾತವಾಗಿದೆ. ಈ ಎಲ್ಲಾ ನೀರಿನ ಮೂಲಗಳನ್ನು ಪುನರುಜ್ಜೀವಗೊಳಿಸಬೇಕು.


  • ಎತ್ತಿನಹೊಳೆ ಯೋಜನೆ ಮತ್ತು ಬೆಂಗಳೂರು  ಸ್ಟೀಲ್ ಫ್ಲೈ ಓವರ್ ಯೋಜನೆ ಬಗ್ಗೆ ನಿಮಗೇನಾದರೂ ಸಾಮ್ಯತೆ ಕಾಣುತ್ತಿದೆಯೇ ?

ದುಬಾರಿ ಯೋಜನೆಗಳನ್ನು ಕೈಗೆತ್ತಿಕೊಳ್ಳುವುದು ಒಂದು ಖಯಾಲಿಯಾಗಿ ಬಿಟ್ಟಿದೆ. ಇದು ರಾಜಕಾರಣಿಗಳು, ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಖಂಡಿತ ಸಹಾಯ ಮಾಡುತ್ತದೆ, ಆದರೆ ಜನರಿಗಲ್ಲ. (ಕೃಪೆ : ಡೆಕ್ಕನ್ ಕ್ರಾನಿಕಲ್)