ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಸೇವೆ ಇಲ್ಲ

ಬಡ ರೋಗಿಗಳು ಖಾಸಗಿ ಆಸ್ಪತ್ರೆಗಳಲ್ಲಿ ಹಣ ಪಾವತಿಸಿ ಚಿಕಿತ್ಸೆ ಪಡೆಯಲು ಅಸಾಧ್ಯವಾಗದೆ ಇರುವುದರಿಂದ ಸರಕಾರಿ ಆಸ್ಪತ್ರೆಯನ್ನು ಹೆಚ್ಚೆಚ್ಚು ಅವಲಂಬಿಸಿ ಹೋದರೆ ಅಲ್ಲಿ ಅವರಿಗೆ ನಿರಾಸೆ ಕಾಡುತ್ತದೆ. ಸರಕಾರಿ ಆಸ್ಪತ್ರೆಗಳಲ್ಲೂ ಬಡ ರೋಗಿಗಳಿಗೆ ಆರೋಗ್ಯ ಸೇವೆ ನೀಡಲು ಹಣ ಪಡೆಯಲಾಗುತ್ತಿದೆ. ಅದಲ್ಲದೆ ಆಸ್ಪತ್ರೆಯಲ್ಲಿ ಯಾವ ಸೇವೆಗಳಿಗೆ ಹಣ ಪಾವತಿಸಬೇಕು, ಯಾವ ಸೇವೆ ಉಚಿತ ಎಂಬುದರ ಬಗ್ಗೆ ನಾಮಫಲಕ ಹಾಕುತ್ತಿಲ್ಲ. ಇದರಿಂದ ವಿಧಿಯಿಲ್ಲದೆ ಬಡ ರೋಗಿಗಳು ಸರಕಾರಿ ಆಸ್ಪತ್ರೆಗಳಲ್ಲಿ ಕೇಳಿದಷ್ಟು ಹಣ ನೀಡಿ ಆರೋಗ್ಯ ಸೇವೆ ಪಡೆಯುವಂತಾಗಿದೆ. ಆದ್ದರಿಂದ ಜಿಲ್ಲಾಧಿಕಾರಿಗಳು, ಜಿಲ್ಲಾ ಆರೋಗ್ಯ ಅಧಿಕಾರಿಗಳು ಸರಕಾರಿ ಆಸ್ಪತ್ರೆಗಳಿಗೆ ದಿಢೀರ್ ಭೇಟಿ ನೀಡಿ ಬಡ ರೋಗಿಗಳಿಂದ ಅಹವಾಲು ಸ್ವೀಕರಿಸಿ ರೋಗಿಗಳಿಂದ ಹಣ ವಸೂಲಿ ಮಾಡುತ್ತಿರುವ ಆಸ್ಪತ್ರೆ ಆಡಳಿತಾಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಿದರೆ ಮಾತ್ರ ಪರಿಸ್ಥಿತಿಯಲ್ಲಿ ಒಂದಿಷ್ಟು ಬದಲಾಗಬಹುದೇನೋ ?

  • ಮಾಧವ ಸುವರ್ಣ, ಪಾಂಡೇಶ್ವರ-ಮಂಗಳೂರು