ಸರಕಾರದಿಂದ ನಿರೀಕ್ಷೆ ಹುಸಿ

ಕುಮಾರ ಬಂಗಾರಪ್ಪ

ನಮ್ಮ ಪ್ರತಿನಿಧಿ ವರದಿ

ಭಟ್ಕಳ : “ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ 4 ವರ್ಷಗಳಲ್ಲಿ ಜನರ ನಿರೀಕ್ಷೆಯನ್ನು ಹುಸಿಗೊಳಿಸಿದೆ. ರಾಜ್ಯದಲ್ಲಿ ಭೀಕರ ಬರಗಾಲವಿದ್ದರೂ ರಾಜ್ಯ ಸರ್ಕಾರ ಸ್ಪಂದಿಸದೇ ಕೇಂದ್ರ ಸರ್ಕಾರದಿಂದ ಅನುದಾನ ಬಂದಿಲ್ಲ ಎಂಬ ಸಬೂಬು ಹೇಳಿ ಕಾಲಹರಣ ಮಾಡುತ್ತಿದೆ” ಎಂದು ಬಿಜೆಪಿ ಮುಖಂಡ ಕುಮಾರ ಬಂಗಾರಪ್ಪ ಹೇಳಿದರು.

ತಾಲೂಕಿನ ಕಿತ್ರೆಯ ಶ್ರೀ ಕ್ಷೇತ್ರ ದೇವಿಮನೆಯಲ್ಲಿ ಗುರುವಾರ ನಡೆದ ಮದುವೆ ಸಮಾರಂಭವೊಂದರಲ್ಲಿ ಪಾಲ್ಗೊಂಡ ನಂತರದಲ್ಲಿ `ಕನ್ನಡ ಜನಾಂತರಂಗ’ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, “ರಾಜ್ಯದಲ್ಲಿ ಬರಗಾಲದಿಂದ ಜನರು ತತ್ತರಿಸಿ ಹೋಗಿದ್ದಾರೆ. ಬರಗಾಲ ಪೀಡಿತ ಪ್ರದೇಶಗಳ ಜನರಿಗೆ ಸ್ಪಂದಿಸಬೇಕಾದ ಸರ್ಕಾರ ಸುಮ್ಮನಿದೆ. ವಿನಾಕಾರಣ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿರುವುದು ಸರಿಯಲ್ಲ. ರಾಜ್ಯದಲ್ಲಿ ಬಿಜೆಪಿ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ. ರಾಜ್ಯಮಟ್ಟದಲ್ಲಿ ನಾನು ಸೇರಿದಂತೆ ಹಲವಾರು ಮುಖಂಡರು ಬಿಜೆಪಿಗೆ ಸೇರ್ಪಡೆಯಾಗಿದ್ದೇವೆ. ಕರಾವಳಿಯಲ್ಲಿ ಬಿಜೆಪಿ ಬಲಿಷ್ಠವಾಗಿದ್ದು, ನಾವೆಲ್ಲರೂ ಪಕ್ಷ ಸಂಘಟನೆಗೆ ದುಡಿದು ಬಿಜೆಪಿಯನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರುವುದೇ ನಮ್ಮ ಗುರಿಯಾಗಿದೆ. ಭಟ್ಕಳದಲ್ಲೂ ರಾಜಕೀಯ ದ್ರುವೀಕರಣ ಆಗಿದೆ. ಇಲ್ಲಿಯೂ ಕೂಡ ಬಿಜೆಪಿ ಬಲಿಷ್ಠವಾಗಿದೆ” ಎಂದರು.

ಮಾಜಿ ಶಾಸಕ ಜೆ ಡಿ ನಾಯ್ಕ, ಮುಖಂಡರಾದ ನಾಗೇಶ ದೇವಾಡಿಗ, ಸಚಿನ್ ನಾಯ್ಕ, ನಾರಾಯಣ ನಾಯ್ಕ, ಬೆಳಕೆ ಗ್ರಾ ಪಂ ಅಧ್ಯಕ್ಷ ರಮೇಶ ನಾಯ್ಕ, ಮಂಜ

ಪ್ಪ ನಾಯ್ಕ ಮುರ್ಡೇಶ್ವರ ಮತ್ತಿತರರಿದ್ದರು.