ಕಾರ್ಕಳ ನಾರಾವಿ ಅಳದಂಗಡಿ ರೂಟಲ್ಲಿ ಸರಕಾರಿ ಬಸ್ ಒದಗಿಸಿ

ಕಾರ್ಕಳ ತಾಲೂಕಿನ ನಾರಾವಿಯು ಬಜಗೋಳಿ-ಶಿರ್ತಾಡಿ_ಈದು-ಪೊಡಿ ಮರೋಡಿಗಳನ್ನು ಸಂಪರ್ಕಿಸುವ ನಗರ ಪ್ರದೇಶವಾಗಿದೆ. ಇಲ್ಲಿಂದ ದಿನನಿತ್ಯ ವ್ಯವಹಾರಕ್ಕೆ ವಿದ್ಯಾರ್ಜನೆಗೆ ಸರಕಾರಿ ಕಚೇರಿಗೆ ತೆರಳಲು ತಾಲೂಕು ಕೇಂದ್ರ ಬೆಳ್ತಂಗಡಿ ಆಗಿರುತ್ತದೆ. ದಿನನಿತ್ಯ ಶಾಲಾ ಮಕ್ಕಳು, ಕೆಲಸಕ್ಕೆ ಹೋಗುವವರು ಬೆಳಗ್ಗೆ ಮತ್ತು ಸಾಯಂಕಾಲ ನೇತಾಡಿಕೊಂಡೇ ಪ್ರಯಾಣಿಸಬೇಕಾಗಿದೆ. ಕಾರ್ಕಳ, ಅಳದಂಗಡಿ, ಬೆಳ್ತಂಗಡಿ ರಸ್ತೆಯಲ್ಲಿ ಸಂಚರಿಸುವ ಜನರು ಖಾಸಗಿ ಬಸ್ಸನ್ನೇ ಅವಲಂಬಿಸುವುದರಿಂದ ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಸಮಯಕ್ಕೆ ಸರಿಯಾಗಿ ಬಾರದ ಬಸ್ಸು, ಚಿಲ್ಲರೆ ನೀಡದೇ ಇರುವುದು, ಟಿಕೆಟ್ ಕೊಡದೇ ಇರುವುದು, ಅಸಹ್ಯ ರೀತಿಯಿಂದ ವರ್ತಿಸುವುದು ಮುಂತಾಗಿ ಇಲ್ಲಿಯ ನಿರ್ವಾಹಕರ ವರ್ತನೆಯಿಂದ ಜನಸಾಮಾನ್ಯರು ರೋಸಿ ಹೋಗಿದ್ದಾರೆ
ಖಾಸಗಿ ಬಸ್‍ಗಳಿಗೆ ಬೆಳ್ತಂಗಡಿಯಿಂದ ಧರ್ಮಸ್ಥಳಕ್ಕೆ ಪರವಾನಿಗೆ ಇಲ್ಲ. ಎಲ್ಲಿಯಾದರೂ ಈ ಬಸ್ ಅಪಘಾತವಾದಲ್ಲಿ ಪ್ರಯಾಣಿಕರಿಗೆ ಯಾವುದೇ ಜೀವ ವಿಮೆಯಿಲ್ಲದವರು ಆ ಬಸ್ಸಲ್ಲಿ ಸಂಚರಿಸಿದ್ದಾರೆಂದು ದೃಢೀಕರಿಸಲು ಬೆಳ್ತಂಗಡಿ, ಧರ್ಮಸ್ಥಳಕ್ಕೆ ಪ್ರಯಾಣಿಕರಿಗೆ ನಿರ್ವಾಹಕರು ಟಿಕೆಟ್ ಸಹ ನೀಡುವುದಿಲ್ಲ. ಇದಕ್ಕೆ ಪರ್ಯಾಯವಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯವರು ಧರ್ಮಸ್ಥಳ ಬೆಳ್ತಂಗಡಿ- ಅಳದಂಗಡಿ-ನಾರಾವಿ ಕಾರ್ಕಳ ಹೆದ್ದಾರಿಯಲ್ಲಿ ಬಸ್ ಸಂಚರಿಸಲು ಅನುವು ಮಾಡಿಕೊಟ್ಟಿದೆ. ದಿನಂಪ್ರತಿ ತೆರಳಲು ಜನ ಸಾಮಾನ್ಯರಿಗೆ ಮಾಸಿಕ ಪಾಸು ಶಾಲಾ ಮಕ್ಕಳಿಗೆ ರಿಯಾಯ್ತಿ ಪಾಸ್ ದರದಲ್ಲಿ ಪ್ರಯಾಣಿಸಲು ಅನುಕೂಲವಾಗುತ್ತದೆ. ಆದ್ದರಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಜಿಲ್ಲಾಧಿಕಾರಿ, ಸ್ಥಳೀಯ ರಾಜಕೀಯ ಜನಪ್ರತಿನಿಧಿಗಳು ಮುತುವರ್ಜಿವಹಿಸಿ ಕಾರ್ಕಳ ನಾರಾವಿ ಧರ್ಮಸ್ಥಳಕ್ಕೆ ರಾಜ್ಯ ರಸ್ತೆ ಸಾರಿಗೆ ಬಸ್ಸಿನ ವ್ಯವಸ್ಥೆಯನ್ನು ಆದಷ್ಟು ಬೇಗ ಮಾಡಬೇಕಾಗಿ ನಾರಾವಿ ನಾಗರಿಕರ ಕಳಕಳಯ ಮನವಿ

  • ಎಸ್ ಕೆ   ಬೆಳ್ತಂಗಡಿ