ಕಾರಿಗೆ ಸರಕಾರಿ ಬಸ್ ಡಿಕ್ಕಿ

ನಮ್ಮ ಪ್ರತಿನಿಧಿ ವರದಿ

ವಿಟ್ಲ : ಮಿತಿಮೀರಿದ ವೇಗದಲ್ಲಿದ್ದ ಸರಕಾರಿ ಬಸ್ ವಿಟ್ಲ ಸಮೀಪ ಕಾರಿಗೆ ಡಿಕ್ಕಿ ಹೊಡೆದು ಪರಾರಿಯಾಗುತ್ತಿದ್ದಂತೆ ಸಾರ್ವಜನಿಕರು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಇಲ್ಲಿನ ಸರಕಾರಿ ಬಸ್ ನಿಲ್ದಾಣದ ಸಮೀಪ ಕಾಶಿಮಠ ಅಪಾಯಕಾರಿ ತಿರುವಿನಲ್ಲಿ ವಿಟ್ಲ-ಕಾಸರಗೋಡು ಮಧ್ಯೆ ಸಂಚರಿಸುವ ಸರಕಾರಿ ಬಸ್ ಚಾಲಕನ ಬೇಜವಾಬ್ದಾರಿಯಿಂದ ಕಾರಿಗೆ ಡಿಕ್ಕಿ ಹೊಡೆದಿದೆ.

ಅಪಘಾತವಾದ ಕಾರಿನ ಪ್ರಯಾಣಿಕರು ಕೆಳಗಿಳಿಯುತ್ತಿದ್ದಂತೆ ಬಸ್ ಚಾಲಕ ತನಗೆ ಸಂಬಂಧಿಸಿದ್ದಲ್ಲ ಎಂಬಂತೆ ಸ್ಥಳದಲ್ಲಿ ನಿಲ್ಲಿಸದೆ ಮುಂದೆ ಸಂಚರಿಸಿದ್ದಾನೆ. ತಕ್ಷಣವೇ ಎಚ್ಚೆತ್ತ ಸಾರ್ವಜನಿಕರು ಬಸ್ಸನ್ನು ಹಿಂಬಾಲಿಸಿ ಉಕ್ಕುಡ ಎಂಬಲ್ಲಿ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದೇ ಕಾಶಿಮಠ ಅಪಾಯಕಾರಿ ತಿರುವಿನಲ್ಲಿ ಇತ್ತೀಚೆಗಷ್ಟೆ ಲಾರಿ ಡಿಕ್ಕಿ ಹೊಡೆದು ಬೈಕ್ ಸವಾರ ನಿವೃತ್ತ ಯೋಧರೊಬ್ಬರು ಸಾವನ್ನಪ್ಪಿದ್ದರು.