ದೇಶದ ಬೆನ್ನೆಲುಬನ್ನೇ ತುಂಡರಿಸುತ್ತಿದೆ ಸರಕಾರ

ಕೇಂದ್ರ ಸರಕಾರ ಗೋಹತ್ಯಾ ನಿಷೇಧ ಕಾಯಿದೆ ತಂದು ಬಾಗಿದ್ದ ರೈತರ ಮೂಳೆಯನ್ನು ಸಂಪೂರ್ಣ ಮುರಿದು ಹಾಕಿದೆ

ಪ್ರಕೃತಿಯ ವಿಕೋಪಕ್ಕೆ ಒಳಗಾಗಿ ಅಪಾರ ಹಾನಿ ಸಂಭವಿಸಿದರೂ ರೈತ ದೇಶಕ್ಕೆ ನಿಸ್ವಾರ್ಥ ಸೇವೆಯಿಂದ ಅನ್ನ ನೀಡಲು ಮುಂದಾಗುತ್ತಾನೆ. ಈಗಲೂ ಅದೇ ಕೆಲಸ ಮಾಡುತ್ತಿದ್ದಾನೆ ಕೂಡಾ. ನಮ್ಮ ಸರಕಾರಗಳು ಅಧಿಕಾರದ ಆಸೆಗಾಗಿ ನಾವು ಅಧಿಕಾರಕ್ಕೆ ಬಂದರೆ ನೀವು ಮಾಡಿರುವ ಸಾಲ ಮನ್ನಾ ಮಾಡುತ್ತೇವೆ ಎಂದು ಮುಗ್ಧ ರೈತರನ್ನು ವಂಚಿಸಿ, ಅಧಿಕಾರಕ್ಕೆ ಬಂದ ಮೇಲೆ ರೈತರನ್ನು ಕೀಳಾಗಿ ಕಾಣುತ್ತಿವೆ. ಇದಕ್ಕೆ ಉದಾಹರಣೆ ಎಂಬಂತೆ ಇತ್ತೀಚೆಗೆ ರಾಜ್ಯ ಹಾಗೂ ಕೇಂದ್ರ ಸರಕಾರದ ನಡುವೆ ರೈತರ ಸಾಲಮನ್ನಾ ಮಾಡುವ ವಿಚಾರವಾಗಿ ಒಳಜಗಳಗಳು ಹುಟ್ಟಿಕೊಂಡಿದೆ. ಸಾಲಮನ್ನಾ ಆಗುತ್ತದೋ ಬಿಡುತ್ತದೋ ಅದು ಪ್ರಶ್ನಾರ್ಹ. ಆದರೆ, ಇತ್ತೀಚೆಗೆ ಕೇಂದ್ರ ಸರಕಾರ ಗೋಹತ್ಯಾ ನಿಷೇಧ ಕಾಯಿದೆ ತಂದು ಬಾಗಿದ್ದ ರೈತರ ಮೂಳೆಯನ್ನು ಸಂಪೂರ್ಣ ಮುರಿದು ಹಾಕಿದೆ. ರೈತ ತಾನು ಸಾಕುವ ಪ್ರಾಣಿಗಳನ್ನು ದೇವರಂತೆ ಕಂಡರೂ ಅವುಗಳಿಗೆ ವಯಸ್ಸಾದಾಗ ಅದರ ಆರೈಕೆ ಮಾಡಲು ಮುಂದಾಗುವುದಿಲ್ಲ. ಅದು ಆಗದ ಕೆಲಸ. ಈ ಹಿನ್ನೆಲೆಯಲ್ಲಿ ಅವು ನರಳಿಕೊಂಡೇ ಮನೆಯಲ್ಲಿ ಸಾಯಬೇಕು. ಇದರ ಬದಲು ರೈತ ತನ್ನ ಜಾನುವಾರುಗಳನ್ನು ಕೊನೆ ಘಳಿಗೆಯಲ್ಲಿ ಮಾರಾಟ ಮಾಡಿದರೆ ಆಗುವ ನಷ್ಟವೇನೂ ಇಲ್ಲ

  • ಅವಿನಾಶ್ ಎಂ  ಕಂಕನಾಡಿ ಮಂಗಳೂರು