ಸೀಎಂ ವಿರುದ್ಧ ಲೋಕಾ ತನಿಖೆಗೆ ರಾಜ್ಯಪಾಲ ಆದೇಶ

 

ಅಕ್ರಮ ಗಣಿಗಾರಿಕೆಗೆ ಕುಮ್ಮಕ್ಕು ಆರೋಪ

 

ಮಂಡ್ಯ : ಅಕ್ರಮ ಗಣಿಗಾರಿಕೆ ಪ್ರಕರಣವೊಂದರಲ್ಲಿ ಆರೋಪಿಗಳಿಗೆ ಸಹಾಯ ಮಾಡಿದ್ದಾರೆ ಎಂದು ಆರೋಪಿಸಿ ಆರ್ಟಿಐ ಕಾರ್ಯಕರ್ತ ಕೆ ಆರ್ ರವೀಂದ್ರ ಎಂಬವರು ರಾಜ್ಯಪಾಲರಿಗೆ ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ  ನೀಡಿದ ದೂರಿನ ಆಧಾರದಲ್ಲಿ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗೆ  ನೀಡಲಾದ ಸೂಚನೆಯಂತೆ ಲೋಕಾಯುಕ್ತ  ತನಿಖೆಗೆ ಜನವರಿ 23ರಂದೇ ಆದೇಶಿಸಲಾಗಿದ್ದು ಫೆಬ್ರವರಿ 22ರೊಳಗೆ ವರದಿ ಸಲ್ಲಿಸಲು ತಿಳಿಸಲಾಗಿದೆ.

ಕೆಲವು ಪಟ್ಟಭದ್ರ ಹಿತಾಸಕ್ತಿಗಳು  ಮೈಸೂರು ಮಹಾರಾಜರಿಗೆ ಸೇರಿದ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಬೇಬಿ ಬೆಟ್ಟ ಸರ್ವೆ ಸಂಖ್ಯೆ 1ರ 1623.07 ಎಕರೆ ಜಾಗವನ್ನು  ಸರಕಾರಿ ಆಸ್ತಿ ಎಂದು ದಾಖಲೆಗಳಲ್ಲಿ ತಿದ್ದುಪಡಿ ಮಾಡಿ ಈ ಮೂಲಕ ಈ ಜಾಗವನ್ನು ಕಬಳಿಸುವ ಉದ್ದೇಶವನ್ನು ಹೊಂದಿದ್ದವು ಹಾಗೂ ಕಲ್ಲು ಗಣಿಗಾರಿಕೆ ಘಟಕಗಳಿಗೆ ಜಮೀನು ಲೀಸಿಗೆ ನೀಡಲು ಅನುಮತಿಸುವಂತೆ  ಸಿದ್ದರಾಮಯ್ಯ ಅಧಿಕಾರಿಗಳ ಮೇಲೆ ಒತ್ತಡ ಹೇರಿದ್ದರು ಎಂದು ದೂರುದಾರರು ಆರೋಪಿಸಿದ್ದರು.

“ಮಂಡ್ಯದ ವಿಶೇಷ ಲೋಕಾಯುಕ್ತ ನ್ಯಾಯಾಲಯ

ವಿಚಾರಣೆ ಪೂರ್ತಿಗೊಳಿಸಿ ಸದ್ಯದಲ್ಲಿಯೇ ತೀರ್ಪು ನೀಡಲಿರುವ ಸಂದರ್ಭ ಮತ್ತೆ ಲೋಕಾಯುಕ್ತ ತನಿಖೆ ಅಗತ್ಯವಿಲ್ಲ. ಆದರೂ ಮತ್ತೆ ತನಿಖೆಗೆ ಆದೇಶಿಸಿರುವುದರ ಹಿಂದೆ ಮುಖ್ಯಮಂತ್ರಿಯನ್ನು ಪಾರು ಮಾಡುವ ಉದ್ದೇಶದಿಂದ ರಾಜ್ಯಪಾಲರು ಹೀಗೆ ಮಾಡಿರಬಹುದೆಯೆಂಬ ಸಂಶಯವಿದೆ” ಎಂದು ದೂರುದಾರರು ತಮ್ಮ ಅಸಮಾಧಾನ ಹೊರಗೆಡಹಿದ್ದಾರೆ.

 

 

LEAVE A REPLY