ಒಳ್ಳೆಯ ಮಾತು ವ್ಯಕ್ತಿತ್ವ ಮಾದರಿಯಾಗಬಹುದು

ಮಾತಿನಿಂದ ಒಬ್ಬ ವ್ಯಕ್ತಿಯ ಗುಣ ಹಿನ್ನಲೆಯನ್ನು ಅರಿಯಬಹುದಂತೆ. ಇದು ಬಲ್ಲವರ ಮಾತು. ಒಳ್ಳೆಯ ಮಾತು ಮತ್ತು ವ್ಯಕ್ತಿತ್ವ ನಮಗೆ ಮಾದರಿಯಾಗಲೂಬಹುದು. ಹಿಂದಿನ ಪ್ರತಿಷ್ಠಿತ ವ್ಯಕ್ತಿಗಳ ಮಾತು, ಅವರ ವ್ಯಕ್ತಿತ್ವ ನಮಗೆ ಮಾದರಿಯಾಗುತ್ತಿತ್ತು. ಆದರೆ ಇಂದು ನಮ್ಮನ್ನಾಳುವ ಕೆಲ ಪ್ರತಿಷ್ಠಿತ ವ್ಯಕ್ತಿಗಳ ಮಾತುಗಳು ತೀರಾ ಕೆಳಮಟ್ಟಕ್ಕೆ ಇಳಿದುಬಿಟ್ಟಿದೆ. ಇದು ಎಂದಿಗೂ ನಮಗೆ ಆದರ್ಶವಲ್ಲ. ಪ್ರತಿಷ್ಠಿತ ವ್ಯಕ್ತಿಗಳು ಸಾರ್ವಜನಿಕವಾಗಿ ಮಾತನಾಡುವ ಸಂದರ್ಭದಲ್ಲಿ ತಮ್ಮ ಹತೋಟಿಯಲ್ಲಿದ್ದರೆ ಒಳಿತು. ಅಸಭ್ಯವಾಗಿ ಮಾತನಾಡಿದರೆ ಅವರ ವ್ಯಕ್ತಿತ್ವ ಅರಿಯುತ್ತದೆ. ಎಲುಬಿಲ್ಲದ ನಾಲಿಗೆ ಹೇಗೆ ಬೇಕಾದರೂ ಹೊರಳುತ್ತದೆ. ಇದಕ್ಕಾಗಿಯೇ ಪುರಂದರದಾಸರು ತಮ್ಮ ಕೀರ್ತನೆಯಲ್ಲಿ ಹೀಗೆ ಹೇಳಿದ್ದಾರೆ ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ

  • ಬೇಬಿ ಆರ್ ಗೌಡ  ಉಪ್ಪಿನಂಗಡಿ