ಮಕ್ಕಳ ನಿಕ್ಷೇಪ ಯೋಜನೆಗೆ ಉತ್ತಮ ಬೆಂಬಲ

 

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಕಾಸರಗೋಡು ಪಬ್ಲಿಕ್ ಸರ್ವೆಂಟ್ಸ್ ಸಹಕಾರಿ ಸಂಘ ಜಾರಿಗೆ ತಂದಿರುವ ಮಕ್ಕಳ ನಿಕ್ಷೇಪ ಯೋಜನೆಗೆ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ.

ಬೋವಿಕ್ಕಾನ ಬಿ ಎ ಆರ್ ಎಚ್ ಎಸ್, ಕುಂಬಳೆ ಜಿ ಎಸ್ ಬಿ ಎಸ್, ಕುಂಬಳೆ ಜಿ ಎಚ್ ಎಸ್, ಮುಳ್ಳೇರಿಯ ಗಜಾನನ ಎಲ್ ಪಿ ಶಾಲೆಗಳಲ್ಲಿ ಇತ್ತೀಚೆಗೆ ಈ ಠೇವಣಿ ಯೋಜನೆ ವಿಸ್ತರಿಸಲಾಗಿದೆ. ಬೋವಿಕ್ಕಾನ ಬಿ ಎ ಆರ್ ಎಚ್ ಎಸ್ ಶಾಲೆಯಲ್ಲಿ ನಡೆದ ಕಾರ್ಯಕ್ರಮಕ್ಕೆ ಹೈಯರ್ ಸೆಕೆಂಡರಿ ಪ್ರಾಂಶುಪಾಲ ಮೆಜೋ ಜೋಸೆಫ್ ಮಕ್ಕಳಿಗೆ ಪಾಸ್ ಪುಸ್ತಕ ನೀಡುವ ಮೂಲಕ ಚಾಲನೆ ನೀಡಿದರು. ಮುಳ್ಳೇರಿಯಾದಲ್ಲಿ ಕಾರಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸ್ವಪ್ನ ಜಿ ಯೋಜನೆಗೆ ಚಾಲನೆ ನೀಡಿದರು.

LEAVE A REPLY