ಪಾರ್ಕಿಂಗ್ ಸ್ಥಳ ಇದ್ದರೆ ವಾಹನಗಳ ನೋಂದಣಿ

ಇತ್ತೀಚೆಗೆ ವಾಹನಗಳ ಸಂಖ್ಯೆ ದಿನೇ ದಿನೇ ಜಾಸ್ತಿಯಾಗುತ್ತಿದೆ  ವಾಹನಗಳನ್ನು ತಮ್ಮ ಮನೆಯ ಆವರಣದೊಳಗೆ ನಿಲ್ಲಿಸಲು ಜಾಗವಿಲ್ಲದವರು ರಸ್ತೆ ಮತ್ತು ಫುಟ್ಪಾತುಗಳಲ್ಲಿ ಸಿಕ್ಕಿದಲ್ಲಿ ನಿಲ್ಲಿಸಿ  ಸುಗಮ ಸಂಚಾರಕ್ಕೆ ಅಡೆತಡೆಯೊಡ್ಡುವ ಪ್ರಸಂಗಗಳು ಹೆಚ್ಚಾಗುತ್ತಿವೆ  ನಮ್ಮ ರಸ್ತೆಗಳ ಅವಸ್ಥೆ ಹೇಳತೀರದು. ನಗರದ ಮುಖ್ಯ ರಸ್ತೆಗಳನ್ನು ಬಿಟ್ಟರೆ  ಒಳ ರಸ್ತೆ  ಅಡ್ಡರಸ್ತೆಗಳೆಲ್ಲಾ ಅಗಲ ಕಿರಿದಾಗಿ ಒಂದು ವಾಹನ ಹೋಗಲಷ್ಟೇ ಸೀಮಿತವಾಗಿದೆ  ಅಂಥದರಲ್ಲೂ ರಸ್ತೆಗಳಲ್ಲಿ ವಾಹನ ಪಾರ್ಕಿಂಗ್ ಹೆಚ್ಚುತ್ತಿದೆ  ಎಲ್ಲರಿಗೂ ಕಾರು  ದ್ವಿಚಕ್ರ ಬೇಕೆಂಬ ಆಸೆ  ಆದರೇನು ಮಾಡುವುದು   ವಾಹನ ಮನೆಯೊಳಗಿನ ಆವರಣದಲ್ಲಿಡಲು ಸ್ಥಳವಕಾಶವಿಲ್ಲ  ಕೆಲವು ಮನೆಗಳಲ್ಲಿ ಡೆಸ್ಟರ್  ಇನ್ನೋವಾ  ಫೋರ್ಡ್  ಟೊಯೊಟಾ ಇತ್ಯಾದಿ ಕಂಪೆನಿಯ ದೊಡ್ಡ ದೊಡ್ಡ ಗಾಡಿಗಳು ನಾಲ್ಕೈದು ಇರುತ್ತವೆ
ಈಗಿನ ಪರಿಸ್ಥಿತಿಯಂತೆ ಕೇಂದ್ರ ಸರಕಾರ ತಳೆದಿರುವ ನಿರ್ಧಾರ ಸರಿಯಾಗಿದೆ. ಮನೆ ಆವರಣದೊಳಗೆ ವಾಹನ ನಿಲ್ಲಿಸಲು ಸೂಕ್ತ ಸ್ಥಳವಕಾಶ ಇಲ್ಲದಿದ್ದರೆ ಹೊಸ ಕಾರಿಗೆ ನೋಂದಣಿ ಇಲ್ಲ ಆವಾಗ ದಾರಿಯುದ್ಧಕ್ಕೂ ರಸ್ತೆ ಬದಿಯಲ್ಲಿ ವಾಹನ ಪಾರ್ಕ್ ಮಾಡುವ ಹಾಗೂ ಸಾರ್ವಜನಿಕರಿಗೆ ತೊಂದರೆ ಅನಾನುಕೂಲವಾಗುವುದನ್ನು ತಪ್ಪಿಸಿದಂತಾಗುವುದಿಲ್ಲವೇ   ಇದಲ್ಲದೆ ಒಂದೊಂದು ಮನೆಯಲ್ಲಿ ಇಷ್ಟೇ ವಾಹನ  ಕಾರುಗಳು ಇರಬೇಕು  ಅದಕ್ಕಿಂತ ಜಾಸ್ತಿ  ವಾಹನ ಖರೀದಿಸಿದಲ್ಲಿ ಅವುಗಳಿಗೆ ಸಹ ನೋಂದಣಿ ಮಾಡುವಂತಿಲ್ಲ ಎಂಬ ಕಾನೂನು ಜಾರಿಗೆ ತರಬೇಕು ಮನೆಯಲ್ಲಿ ಮೂರು ನಾಲ್ಕು ಮಂದಿಯಾದರೆ ನಾಲ್ಕೈದು ವಾಹನಗಳು ಯಾತಕ್ಕೆ   ಅವುಗಳನ್ನು ತೊಳೆಯಲು ಎಷ್ಟೊಂದು ನೀರು ಪೋಲು  ಇಂಧನ ಎಷ್ಟು ಪೋಲು

ಜೆ ಎಫ್ ಡಿಸೋಜ  ಅತ್ತಾವರ