ತ್ಯಾಜ್ಯಕ್ಕೆ ಬೆಂಕಿ ಹಾಕಲು ನಿಷೇಧ ಸಕಾಲಿಕ ಕ್ರಮ

ತೆರೆದ ಸ್ಥಳದಲ್ಲಿ ಕಸ ಸುಡುವುದನ್ನು ದೇಶದ್ಯಂತ ಸಂಪೂರ್ಣ ನಿಷೇóಧಿಸಿರುವ ರಾಷ್ಟ್ರೀಯ ಹಸಿರು ಮಂಡಳಿ ಕ್ರಮ ನಿಜಕ್ಕೂ ಸಮಯೋಚಿತವಾಗಿದೆ  ಕಸವನ್ನು ಸುಟ್ಟರೆ ಅದರ ಪ್ರಮಾಣ ಮೇರೆಗೆ ರೂಪಾಯಿ ಐದು ಸಾವಿರದಿಂದ 25,000ವರೆಗೆ ಪಾರಿಸರಿಕ ಪರಿಹಾರ  ದಂಡ  ನೀಡಬೇಕಂತೆ
ನಗರದ ಹಲವೆಡೆ ಕೆಲವು ಸಂಸ್ಥೆಗಳು  ವ್ಯಾಪಾರಿಗಳು ತಮ್ಮ ತ್ಯಾಜ್ಯ ವಸ್ತು, ಕಸಕಡ್ಡಿಗಳನ್ನೆಲ್ಲ ರಸ್ತೆ ಬದಿಯಲ್ಲಿ ಗುಪ್ಪೆ ಹಾಕಿ ಸುಡುವುದಿದ ತ್ಯಾಜ್ಯದ ಸುಡುವಿಕೆಯಿಂದ ಸುತ್ತಮುತ್ತ ಹೊಗೆ ಹಬ್ಬಿ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತದೆ  ಅಲ್ಲದೆ ಪಕ್ಕದ ಮನೆಯಲ್ಲಿ ವಾಸಿಸುತ್ತಿರುವ ಮನೆ ಮಂದಿಗಳಿಗೆ ಮುಖ್ಯವಾಗಿ ಮಕ್ಕಳು  ಮರಿ ಪ್ರಾಯಸ್ಥದವರಿಗೆ ಹೊಗೆ ಹಬ್ಬಿ ಅವರ ಆರೋಗ್ಯ ಕೆಡಲು ಕಾರಣವಾಗುತ್ತದೆ  ಹೊಗೆ ನಿಜಕ್ಕೂ ದೇಹಕ್ಕೆ ಅಪಾಯಕಾರಿ  ಅದು ಪರಿಸರವನ್ನು ಹದಗೆಡಿಸುತ್ತದೆ
ನಗರದೊಳಗೆ ಒಣಿ ಬೀದಿಗಳಲ್ಲಿ ಮನಪಾ ವತಿಯಿಂದ ವಾರ ವಾರಕ್ಕೆ ಕಸ ಸಂಗ್ರಹಿಸಿದನ್ನು ಕೊಂಡೊಯ್ಯುವ ಬದಲು ಅಲ್ಲಲ್ಲಿ ರಾಶಿ ಹಾಕಿ ಸುಡಲಾಗುತ್ತಿದೆ  ಕೆಲವು ಬಾರಿ ಮುಖ್ಯ ರಸ್ತೆಗಳಲ್ಲೂ ಸಹ ಈ ಪ್ರಕ್ರಿಯೆ ನಡೆದು ಅತ್ತಿತ್ತ ಸಂಚರಿಸುವ ಜನರಿಗೆ ಅಲರ್ಜಿ  ಅಸ್ತಮಾ ಸಮಸ್ಯೆ ಉಲ್ಭಣಗೊಳ್ಳುತ್ತಿದೆ  ಮನಪಾ ಕಸ ಸಂಗ್ರಹಿಸಿ ಸುಟ್ಟರೆ ಇವರಿಗೂ ಸಹ ದಂಡ ವಿಧಿಸುವುದು ಸೂಕ್ತವಲ್ಲವೇ   ಕೆಲವು ಬಾರಿ ಹಳೇ ಟಯರ್ ಸಹ ರಾಶಿ ರಾಶಿ ಸುಡಲಾಗುತ್ತಿದೆ  ಬಂದ್ ಪ್ರತಿಭಟನೆ ವೇಳೆ ಸಹ ರಸ್ತೆಗಳಲ್ಲಿ ಟಯರ್ ಸುಡಲಾಗುತ್ತಿದೆ  ಇವರಿಗೆ ಈ ಹೊಸ ಕಾನೂನಿನಂತೆ ದಂಡ ವಿಧಿಸಬೇಡವೇ   ಅದಲ್ಲದೆ ಪಟಾಕಿಗಳನ್ನು ಸುಡುವುದು ಸಹ ಅಪರಾಧವಲ್ಲವೇ   ರಸ್ತೆಗಳಲ್ಲಿ ಪಟಾಕಿ ಸಿಡಿಸಿ ಸಾರ್ವಜನಿಕರ ಪ್ರಾಣಕ್ಕೆ ಕಂಟಕ ತರುವ ಅಂಗಡಿ ಹಾಗೂ ಇನ್ನಿತರರಿಗೂ ಸಹ ಈ ಕಾನೂನನ್ನು ಅನ್ವಯ ಮಾಡಿದಲ್ಲಿ ಸ್ವಲ್ಪ ಮಟ್ಟಿಗಾದರೂ ಪರಿಸರ ಮಾಲಿನ್ಯಕ್ಕೆ ಕಡಿವಾಣ ಹಾಕಿದಂತಾಗುವುದಿಲ್ಲವೇ

  • ಜೆ ಎಫ್ ಡಿಸೋಜ  ಅತ್ತಾವರ