ಗೋಪಾಲನ ಕಾಣಲು ಬಂದ ಗೋಮಾತೆ

ಮಂಗಳೂರು : ವಿಠಲನ ಜನ್ಮಾಷ್ಟಮಿಯನ್ನು  ಶ್ರೀಕೃಷ್ಣನ ಊರಾದ ಉಡುಪಿ ಸೇರಿದಂತೆ ಎಲ್ಲೆಡೆ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ದೇವಾಲಯದಲ್ಲಿ ಒಂದೆಡೆ ಜನರು ಶ್ರೀಕೃಷ್ಣನ ದರ್ಶನ ಪಡೆದು ಪುನೀತರಾದರೆ ಇಲ್ಲೊಂದೆಡೆ ಗೋಪಾಲಕನನ್ನು ಕಾಣಲು ಗೋಮಾತೆಯೇ ದೇವಾಲಯಕ್ಕೆ ಆಗಮಿಸಿದ್ದಾಳೆ. ಆ ಫೆÇಟೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮಂಗಳೂರು ಹೊರವಲಯದ ಕುಂಪಲದ ಗುರುನಗರದ ಶ್ರೀ ಕೃಷ್ಣ ಮುಖ್ಯಪ್ರಾಣ ದೇವಸ್ಥಾನದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವಿಶೇಷ ಪೂಜೆ ನೆರವೇರಿಸಲಾಗುತಿತ್ತು. ಈ ಸಂದರ್ಭದಲ್ಲಿ ಗೋಪಾಲಕನ ಪೂಜೆಯನ್ನು ಕಣ್ತುಂಬಿಕೊಳ್ಳಲು ಅಲ್ಲಿಗೆ ಗೋವೊಂದು ಆಗಮಿಸಿತ್ತು. ಶ್ರೀಕೃಷ್ಣನಿಗೆ ಪೂಜೆ ನೆರವೇರಿಸಿ ಮಹಾಮಂಗಳಾರತಿ ನಡೆಯುವವರೆಗೂ ದೇವಾಲಯದ ಗರ್ಭಗುಡಿಯ ಹೊರಗೆ ನಿಂತು ಶ್ರೀಕೃಷ್ಣನ ಬಿಂಬವನ್ನು ಕಣ್ತುಂಬಿಕೊಂಡಿತು. ನಂತರ ಪೂಜೆಯ ಪ್ರಸಾದ ಸ್ವೀಕರಿಸಿ ತೆರಳಿತು. ಈ ದೃಶ್ಯ ಕಂಡು ಭಕ್ತರ ಸಮೂಹದ ಮನ ಪುಳಕಿತಗೊಂಡರೆ ಇನ್ನೊಂದೆಡೆ ಈ ದೇವಾಲಯದ ಗರ್ಭಗುಡಿಯ ಹೊರಗೆ ನಿಂತ ಗೋವಿನ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಈಗ ವೈರಲ್ ಆಗಿದೆ.