ಗೋಮಾಳ ಜಾಗ ಖರೀದಿಸುವಂತಿಲ್ಲ ಮಾರುವಂತಿಲ್ಲ

ಒಂದು ವರ್ಷದಿಂದ ಖಾಲಿ ಬಿದ್ದ ಲೋಕಾಯುಕ್ತರ ಹುದ್ದೆಯನ್ನು ತುಂಬಲು ಸರಕಾರ ಹಲವರ ಹೆಸರುಗಳನ್ನು ಶಿಫಾರಸು ಮಾಡುತ್ತಲೇ ಬಂದಿದೆ. ಅವರ ವಿರುದ್ಧದ ಆರೋಪಗಳ ಕಾರಣಕ್ಕಾಗಿ ರಾಜ್ಯಪಾಲರು ಆ ಹೆಸರುಗಳನ್ನು ಅನುಮೋದಿಸಿರಲಿಕ್ಕಿಲ್ಲ. ಈಗ ನ್ಯಾಯಮೂರ್ತಿ ಪಿ ವಿಶ್ವನಾಥ ಶೆಟ್ಟಿ ಅವರ ಹೆಸರು ಶಿಫಾರಸ್ಸಾಗಿದೆ. ಅವರು ಗೋಮಾಳವನ್ನು ತಮ್ಮ ಪತ್ನಿಯ ಹೆಸರಲ್ಲಿ ಖರೀದಿಸಿದ ಆರೋಪ ಎದುರಿಸುತ್ತಿದ್ದಾರೆ. ಗೋಮಾಳವನ್ನು ಯಾರೂ ಖರೀದಿಸುವಂತಿಲ್ಲ ಹಾಗೂ ಮಾರುವಂತಿಲ್ಲ ಎಂಬ ಕಾನೂನಿದೆ. ಕಾನೂನನ್ನು ಉಲ್ಲಂಘಿಸದ ಅರ್ಹ ನ್ಯಾಯಮೂರ್ತಿಗಳೇ ಸರಕಾರಕ್ಕೆ ದೊರೆಯುತ್ತಿಲ್ಲವೋ ಅಥವಾ ತಾವು ಮಾಡುವ ಶಿಫಾರಸು ಅನುಮೋದನೆ ಪಡೆಯದಿರಲಿ ಎಂಬ ಉದ್ದೇಶದಿಂದ ಹೆಸರುಗಳನ್ನು ಸೀಎಂ ಶಿಫಾರಸು ಮಾಡುತ್ತಿದ್ದಾರೋ ಎಂಬ ಅನುಮಾನ ಮೂಡುತ್ತದೆ. ಲೋಕಾಯುಕ್ತ ಹುದ್ದೆ ಖಾಲಿಯಾಗೇ ಉಳಿಯಲಿ. ಇದರಿಂದ ಭ್ರಷ್ಟಾಚಾರಿಗಳು ಇನ್ನೊಂದಿಷ್ಟು ಕಾಲ ಹಾಯಾಗಿರಲಿ ಎಂಬ ಆಲೋಚನೆ ಸರಕಾರಕ್ಕೆ ಇರಬಹುದು ಎನಿಸುತ್ತದೆ

  • ಎಂ ರಮಾನಂದ ಭಟ್ ಬ್ರಹ್ಮಾವರ