ಕುಲಗೆಟ್ಟ ರಸ್ತೆ : ಪ್ರತಿಭಟನೆ

ನಮ್ಮ ಪ್ರತಿನಿಧಿ ವರದಿ

ಬಂಟ್ವಾಳ :  ತಾಲೂಕಿನ ಗೋಳ್ತಮಜಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಅಮ್ಟೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಕೆ ಸಿ ರೋಡ್-ಕೇಶವನಗರ ಸುಮಾರು 5 ಕಿ ಮೀ ರಸ್ತೆ ತೀರಾ ಹದಗೆಟ್ಟಿದ್ದು ವಾಹನ ಹಾಗೂ ಜನ ಸಂಚಾರಕ್ಕೆ ಆಯೋಗ್ಯವಾಗಿದೆ. ಈ ರಸೆಯನ್ನು ದುರಸ್ತಿಗೆ ಆಗ್ರಹಿಸಿ ಸ್ಥಳೀಯ ಸಾರ್ವಜನಿಕರು, ಗೋಳ್ತಮಜಲು ಗ್ರಾ ಪಂ ಸದಸ್ಯರು, ರಿಕ್ಷಾ ಚಾಲಕ-ಮಾಲಕರು ಒಟ್ಟಾಗಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.

ಇಲ್ಲಿನ ರಸ್ತೆ ಡಾಮರೀಕರಣ ಕಾಣದೆ ಸುಮಾರು 10 ವರ್ಷಗಲೇ ಕಳೆದಿವೆ. ರಸ್ತೆಯುದ್ದಕ್ಕೂ ಹೊಂಡ-ಗುಂಡಿಗಳೇ ರಾರಾ ಜಿಸುತ್ತಿವೆ. ಡಾಮರು ರಸ್ತೆಯಲ್ಲಿ ಸಂಪೂರ್ಣವಾಗಿ ಮಾಯವಾಗಿ ಹೋಗಿದೆ.  ಸೇರಿದ ಈ ರಸ್ತೆಯನ್ನು ದುರಸ್ತಿಪಡಿಸುವಂತೆ ಈಗಾಗಲೇ ಸ್ಥಳೀಯ ಶಾಸಕ ಹಾಗೂ ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಯಾವುದೇ ಸ್ಪಂದನೆ ದೊರೆಯದ ಹಿನ್ನಲೆಯಲ್ಲಿ ಇದೀಗ ಸಾರ್ವಜನಿಕರು ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ.

ಮಾಜಿ ಶಾಸಕ ಕೆ ಪದ್ಮನಾಭ ಕೊಟ್ಟಾರಿ, ಗೋಳ್ತಮಜಲು ಗ್ರಾ ಪಂ ಅಧ್ಯಕ್ಷೆ ಜಯಲಕ್ಷ್ಮೀ, ಉಪಾಧ್ಯಕ್ಷ ಹಾಜಿ ಕೆ ಎಸ್ ಮುಸ್ತಫಾ, ತಾ ಪಂ ಮಾಜಿ ಸದಸ್ಯ ದಿನೇಶ್ ಅಮ್ಟೂರು, ಸದಸ್ಯ ಗೋಪಾಲ ಪೂಜಾರಿ, ಶೇಖರ ಕೊಟ್ಟಾರಿ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.