ಮನೆಗೆ ನುಗ್ಗಿ 100 ಪವನ್ ಚಿನ್ನ ಕಳವು

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಮನೆಗೆ ನುಗ್ಗಿದ ಕಳ್ಳರು ನೂರಕ್ಕೂ ಅಧಿಕ ಪವನ್ ಚಿನ್ನ ಮತ್ತು ನಗದು ಹಣ ಕಳವುಗೈದು ಪರಾರಿಯಾದ ಘಟನೆ ಕಂಕನಾಡಿ ನಗರ ಠಾಣಾ ವ್ಯಾಪ್ತಿಯ ಆಡು ಮರೋಳಿ ಬಳಿ ನಡೆದಿದೆ.

ಆಡುಮರೋಳಿಯ ಮಾರಿಕಾಂಬ ದೇವಸ್ಥಾನ ಬಳಿ ನಿವಾಸವನ್ನು ಹೊಂದಿರುವ ಶೇಖರ ಕುಂದರ್ ಮನೆಯಲ್ಲಿ ಈ ಕಳವು ಕೃತ್ಯ ನಡೆದಿದೆ. ಶನಿವಾರ ಮಧ್ಯಾಹ್ನ ಮನೆಗೆ ನುಗ್ಗಿದ ಕಳ್ಳರು ಮನೆ ಕೊಠಡಿಯ ಕಪಾಟುಗಳನ್ನು ಜಾಲಾಡಿ ಬಟ್ಟೆಬರೆಗಳನ್ನು ಚೆಲ್ಲಾಪಿಲ್ಲಿ ಮಾಡಿ ಗೋದ್ರೇಜಿನಲ್ಲಿ ಇರಿಸಲಾಗಿದ್ದ ಚಿನ್ನಾಭರಣ ಕಳವು ಮಾಡಿದ್ದಾರೆ. ಅಲ್ಲದೆ ಡ್ರಾವರಿನಲ್ಲಿದ್ದ 12,500 ನಗದು ಹಣವನ್ನೂ ಕಳವು ಮಾಡಿದ್ದಾರೆ. ಘಟನಾ ಸ್ಥಳಕ್ಕೆ ನಗರ ಠಾಣೆಯ ಪೆÇಲೀಸರು, ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದರು. ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಯುತ್ತಿದೆ.