ಸಂಭ್ರಮಾಚರಣೆ ನೆಪದಲ್ಲಿ ಸ್ವೇಚ್ಛಾಚಾರ ನಡೆಸುವುದನ್ನು ಯಾರೂ ಒಪ್ಪುವುದಿಲ್ಲ

ಹೊಸ ವರ್ಷ ಸಂಭ್ರಮವೆಂದು ದೇಶಾದ್ಯಂತ ಯುವಜನರು ಕುಡಿದು ಬೀಳುವುದನ್ನು ಮಾಧ್ಯಮಗಳಲ್ಲಿ ವೀಕ್ಷಿಸಿದಾಗ ಬಹಳ ಬೇಸರವೆನಿಸಿತು. ಅದರಲ್ಲೂ ಹುಡುಗಿಯರು ಮೈಮರೆತು ಬೀದಿಯಲ್ಲಿ ಹುಡುಗರ ಜತೆ ಕುಡಿದು ಕುಣಿದು ಬೀಳುವುದು ನೋಡಿದರೆ ಖೇದವಾಗುತ್ತದೆ ಸಂಭ್ರಮಾಚರಣೆ ನೆಪವೊಡ್ಡಿ ಸ್ವೇಚ್ಛಾಚಾರ ನಡೆಸುವುದನ್ನು ಯಾರೂ ಒಪ್ಪುವುದಿಲ್ಲ ಆ ದಿನ ಸಾವಿರಾರು ಪೊಲೀಸರನ್ನು ಸುರಕ್ಷತಾ ದೃಷ್ಟಿಯಿಂದ ನಿಯೋಜಿಸಲಾಗಿತ್ತು ಆದರೆ ಇದು ಬೊಕ್ಕಸಕ್ಕೆ ಹೊರೆಯಲ್ಲವೇ ಅವರ ಮೋಜಿಗೆ ಜನರ ತೆರಿಗೆ ದುಡ್ಡು ವ್ಯಯಿಸುವುದು ಎಷ್ಟು ಸರಿ ಮಹಿಳೆಯೊಬ್ಬಳು ಮಧ್ಯರಾತ್ರಿ ಒಬ್ಬಳೇ ಓಡಾಡುವಂತಾದರೆ ಅದು ನಿಜವಾದ ಸ್ವಾತಂತ್ರ್ಯ ಎಂದು ಗಾಂಧೀಜಿಯವರ ನುಡಿಯನ್ನು ಇಂದಿನ ಅನೇಕ ಹೆಣ್ಣು ಮಕ್ಕಳು ಈ ರೀತಿಯಾಗಿ ನೆರವೇರಿಸುತ್ತಿರುವುದು ದುಃಖದ ಸಂಗತಿ ಇವರೆಲ್ಲ ಹೊಸ ವರ್ಷದಂದು ಯಾವುದಾದರೂ ಜಾಗದಲ್ಲಿ ಸ್ವಚ್ಛತಾ ಕಾರ್ಯಕ್ರಮ ಮಾಡುತ್ತಿದ್ದರೆ ಅದಕ್ಕೆ ಅರ್ಥ ಬರುತ್ತಿತ್ತು

  • ಎಂ ಅನುಪಮಾ ಸುವರ್ಣ  ಬಲ್ಮಠ ಮಂಗಳೂರು

LEAVE A REPLY