ದೇವರನಾಡು ಈಗ ರಕ್ಕಸರ ಬೀಡಾಗಿದೆ : ಆರೆಸ್ಸೆಸ್ ಟೀಕೆ

ದತ್ತಾತ್ರೇಯ ಹೊಸಬಾಳೆ

ನವದೆಹಲಿ : “ದೇವರನಾಡು ಎಂದು ಹೆಸರುವಾಸಿಯಾಗಿರುವ ಕೇರಳವು ಈಗ ರಕ್ಕಸರ ನಾಡಾಗಿ ಪರಿವರ್ತನೆಗೊಂಡಿದೆ. ರಾಜಕೀಯ ಹಿಂಸಾಚಾರ ಹೆಚ್ಚಾಗಿರುವ ಕೇರಳದ ವಿಷಯದಲ್ಲಿ ಹಿಂದುಳಿದ ಆಯೋಗ ಮತ್ತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮಧ್ಯಪ್ರವೇಶಿಸಬೇಕು” ಎಂದು ಆರೆಸ್ಸೆಸ್ ನೇತಾರ ದತ್ತಾತ್ರೇಯ ಹೊಸಬಾಳೆ ಆಗ್ರಹಿಸಿದರು.

“ಕೇರಳದಲ್ಲಿ ಆರೆಸ್ಸೆಸ್ ಮತ್ತು ಬಿಜೆಪಿ ಕಾರ್ಯಕರ್ತರ ಬರ್ಬರ ಕೊಲೆ ನಡೆಯುತ್ತಿದ್ದರೂ ಸರ್ಕಾರ ಮೌನವಾಗಿದೆ. ಅಲ್ಲಿ  ಸರ್ಕಾರದ ದಬ್ಬಾಳಿಕೆ ಹತ್ತಿಕ್ಕುವ ದೆಸೆಯಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕೆಂದು ಜನತೆ ಆಗ್ರಹಿಸುತ್ತಿದೆ. ಈಗ ಅಲ್ಲಿ ರಾಜಕೀಯ ಕೊಲೆಗಳು ಹೆಚ್ಚಾಗುತ್ತಿವೆ” ಎಂದವರು ಆರೋಪಿಸಿದರು.