ರೈಲಿನಲ್ಲಿ ಸಾಗಿಸುತ್ತಿದ್ದ ಗೋವಾ ಮದ್ಯ ವಶ

ಉಡುಪಿ : ಲೋಕಮಾನ್ಯ ತಿಲಕ್ ಮಂಗಳೂರು-ಮುಂಬೈ ನಡುವೆ ಸಂಚರಿಸುತ್ತಿದ್ದ ಮತ್ಸ್ಯಗಂಧ ರೈಲಿನಲ್ಲಿ ವಾರಸುದಾರರಿಲ್ಲದೇ ಸಾಗಿಸಲಾಗುತ್ತಿದ್ದ ಗೋವಾ ಮದ್ಯವನ್ನು ರೈಲ್ವೇಯ ವಿಶೇಷ ತಪಾಸಣಾ ದಳದ ಅಧಿಕಾರಿಗಳು ಪತ್ತೆ ಹಚ್ಚಿ ಸರಕನ್ನು ವಶಪಡಿಸಿಕೊಂಡಿದ್ದಾರೆ.

ಒಟ್ಟು 531 ಬಾಟಲಿ ಗೋವಾದಲ್ಲಿ ತಯಾರಿಸಲ್ಪಟ್ಟ 82.35 ಲೀ ವಿವಿಧ ಬ್ರಾಂಡಿನ ಮದ್ಯವನ್ನು ರೈಲಿನ ಜನರಲ್ ಕೋಚಲ್ಲಿ ಸಾಗಿಸಲಾಗುತ್ತಿತ್ತು. ವಶಪಡಿಸಿಕೊಂಡ ಮದ್ಯದ ಒಟ್ಟು ಮೌಲ್ಯ 19,000 ರೂ ಎಂದು ಅಂದಾಜಿಸಲಾಗಿದೆ. ಮದ್ಯವನ್ನು ಕಾರವಾರ ಅಬಕಾರಿ ಇಲಾಖೆಗೆ ಹಸ್ತಾಂತರಿಸಲಾಗಿದೆ ಎಂದು ಕೊಂಕಣ್ ರೈಲ್ವೇಯ ಕೆ ಸುಧಾ ಕೃಷ್ಣಮೂರ್ತಿ ಹೇಳಿದ್ದಾರೆ.