ಗೋವಾ : ಸೇತುವೆ ಕುಸಿದು ಇಬ್ಬರು ಮೃತ, 30 ಮಂದಿ ಇನ್ನೂ ನಾಪತ್ತೆ

ಪಣಜಿ : ನಿನ್ನೆ ಸಂಜೆ ದಕ್ಷಿಣ ಗೋವಾದ ಸನ್‍ರ್ವೋದೆಂ ನದಿಗೆ ಅಡ್ಡಲಾಗಿರುವ ಪೋರ್ಚಗೀಸ್ ಕಾಲದ ಸೇತುವೆ ಕುಸಿದು ಬಿದ್ದು, ಕನಿಷ್ಠ ಪಕ್ಷ ಇಬ್ಬರು ಮೃತಪಟ್ಟಿದ್ದಾರೆ. ಉಳಿದಂತೆ ಈಗಲೂ 30 ಮಂದಿ ನಾಪತ್ತೆಯಾಗಿದ್ದಾರೆಂದು ಪೊಲೀಸರು ತಿಳಿಸಿದರು. ಸರ್ಕೋರೆಂ ಗ್ರಾಮದಲ್ಲಿರುವ ಈ ಶಿಥಿಲ ಸೇತುವೆ ಕುಸಿದು ಬೀಳುವ ಹೊತ್ತಿಗೆ, ಸೇತುವೆಯ ಮೇಲೆ 50ಕ್ಕೂ ಹೆಚ್ಚು ಮಂದಿ ನಿಂತುಕೊಂಡಿದ್ದರು ಅಥವಾ ನಡೆದಾಡುತ್ತಿದ್ದರೆನ್ನಲಾಗಿದೆ.