ಗರ್ಲ್ಫ್ರೆಂಡ್ ನನ್ನ ಜೋಕಿಗೆ ಸೀರಿಯಸ್ಸಾಗುತ್ತಿದ್ದಾಳೆ

ಚೇತನ

ಪ್ರ : ನನಗೆ ತಮಾಷೆ ಮಾಡುವುದು ಒಂದು ಹವ್ಯಾಸವಾಗಿ ಬೆಳೆದುಬಿಟ್ಟಿದೆ. ನನ್ನ ಗರ್ಲ್‍ಫ್ರೆಂಡ್ ಮೊದಲೆಲ್ಲ ನನ್ನ ಜೋಕನ್ನು ಎಂಜಾಯ್ ಮಾಡುತ್ತಿದ್ದಳು. ಹೊಟ್ಟೆಹುಣ್ಣಾಗುವಂತೆ ನಗುತ್ತಿದ್ದಳು ಕೂಡಾ. ಅವಳು ಮಿಡ್ಲ್‍ಕ್ಲಾಸ್ ಕುಟುಂಬ ದವಳಾದರೂ ರೂಪ, ಲಾವಣ್ಯ, ವಿದ್ಯೆಯಲ್ಲಿ, ಗುಣನಡತೆಯಲ್ಲಿ ಯಾರಿಗೂ ಕಡಿಮೆಯಿಲ್ಲ. ನಮ್ಮದು ಅನುಕೂಲಸ್ಥ ಕುಟುಂಬ. ನಾವಿಬ್ಬರೂ ಮುಂದಿನ ವರ್ಷ ಮದುವೆಯಾಗಬೇಕೆಂದಿದ್ದೇವೆ. ಇಬ್ಬರ ಕುಟುಂಬದವರೂ ನಮ್ಮ ಮದುವೆಗೆ ಹಸಿರುನಿಶಾನೆ ತೋರಿಸಿದ್ದರಿಂದ ಬೇರೆ ಯಾವ ಟೆನ್ಷನ್ನೂ ಇಲ್ಲ. ಆದರೆ ಅವಳು ಇನ್ನೂ ಹಳ್ಳಿಯ ಹುಡುಗಿಯ ಹಾಗೆ ಡ್ರೆಸ್ ಮಾಡುತ್ತಾಳೆ. ನಾನು ಅವಳ ಡ್ರೆಸ್ಸಿಂಗ್ ಸೆನ್ಸ್ ಬಗ್ಗೆ ಯಾವಾಗಲೂ ಕಮೆಂಟ್ಸ್ ಮಾಡುತ್ತಿರುತ್ತೇನೆ. ಅವಳು ಕಡಿಮೆ ದರದ ವಸ್ತುಗಳನ್ನೇ ಕೊಳ್ಳುವುದು. ನಾನು ತೆಗೆಸಿಕೊಡುತ್ತೇನೆ ಅಂದರೂ ಅವಳು ಬ್ರಾಂಡೆಡ್ ವಸ್ತುಗಳನ್ನು ಖರೀದಿಸುವುದಿಲ್ಲ. ಮೊದಲೆಲ್ಲ ಅವಳ ಈ ಸ್ವಭಾವದ ಬಗ್ಗೆ ನಾನು ಜೋಕ್ ಮಾಡಿದರೆ ಹಗುರವಾಗಿ ಪರಿಗಣಿಸುತ್ತಿದ್ದಳು. ಆದರೆ ಈಗೀಗ ನಾನು ಆ ವಿಷಯದ ಬಗ್ಗೆ ಏನಾದರೂ ಹೇಳಿದರೆ ತುಂಬಾ ಗಂಭೀರವಾಗುತ್ತಾಳೆ. ಇನ್ನು ಮುಂದೆ ಇಂತಹ ವಿಷಯಕ್ಕೆಲ್ಲ ಸ್ಟುಪಿಡ್ ಜೋಕ್ ಮಾಡಿದರೆ ಬ್ರೇಕಪ್ ಮಾಡಿಕೊಳ್ಳುವುದಾಗಿಯೂ ಹೆದರಿಸು ತ್ತಿದ್ದಾಳೆ. ನಿಮಗೇನನಿಸುತ್ತದೆ, ನನ್ನದು ತಪ್ಪಾ ಅಥವಾ ಅವಳೇ ನನ್ನನ್ನು ತಪ್ಪಾಗಿ ಭಾವಿಸುತ್ತಿದ್ದಾಳಾ?

: ಪ್ರತಿಯೊಂದಕ್ಕೂ ಒಂದು ಲಿಮಿಟ್ ಅಂತ ಇರುತ್ತದೆ. ಮೊದಲೆಲ್ಲ ಏನೋ ತಮಾಷೆಗೆ ಹೇಳಿರಬಹುದು ಅಂತ ಅವಳು ಅಂತಹ ಜೋಕನ್ನು ನಗುತ್ತಾ ಸ್ವೀಕರಿಸಿರಬಹುದು. ಆದರೆ ಪದೇ ಪದೇ ನೀವು ಅವಳ ಡ್ರೆಸ್ ಬಗ್ಗೆ, ಅವಳು ಉಪಯೋಗಿಸುವ ವಸ್ತುಗಳ ಬಗ್ಗೆ ಕಮೆಂಟ್ಸ್ ಮಾಡುತ್ತಿದ್ದರೆ ಸ್ವಾಭಿಮಾನ ಇರುವ ಯಾರಿಗೇ ಆದರೂ ಬೇಸರವಾಗುತ್ತದೆ. ಅವಳು ನೀವು ಈಗ ಕೊಡಿಸುತ್ತೇನೆ ಅಂದರೂ ನಿರಾಕರಿಸುತ್ತಿದ್ದಾಳೆ ಅಂದರೆ ಅವಳೂ ಸ್ವಾಭಿಮಾನಿ ಹುಡುಗಿ ಅನ್ನುವುದರಲ್ಲಿ ಅನುಮಾನವಿಲ್ಲ. ಆಕೆ ಶೋಆಫ್ ಹುಡುಗಿಯಲ್ಲ. ಸಿಂಪಲ್ ಗರ್ಲ್ ಇರಬಹುದು. ಇಲ್ಲದಿದ್ದರೆ ಬಾಯ್‍ಫ್ರೆಂಡ್ ಜೇಬಿಗೆ ಕತ್ತರಿ ಹಾಕುವ ಹುಡುಗಿಯರೇ ಈಗಿನ ಕಾಲದಲ್ಲಿ ಜಾಸ್ತಿಯಿರುವಾಗ ಈಕೆಯಂಥÀವಳು ಸಿಗುವುದು ಅಪರೂಪ. ಅದೂ ಅಲ್ಲದೇ ಆಕೆ ಬಾಹ್ಯ ಸೌಂದರ್ಯಕ್ಕೆ ಮತ್ತು ಫ್ಯಾಶನ್ನಿಗೆ ಹೆಚ್ಚು ಮಹತ್ವ ಕೊಡದ ಹುಡುಗಿ. ನೀವು ಅವಳು ಹೇಗಿದ್ದಳೋ ಹಾಗೇ ಅವಳನ್ನು ಸ್ವೀಕರಿಸಿದರೆ ನಿಮ್ಮ ಲೈಫ್ ಒಳ್ಳೆಯ ರೀತಿಯಲ್ಲಿ ಹೋಗಬಹುದು. ಇಲ್ಲಾ ನೀವು ಬರೀ ಡ್ರೆಸ್ಸಿಂಗ್, ಲುಕ್ಸಿಗೇ ಮಹತ್ವ ಕೊಡುವವರಾಗಿದ್ದರೆ ಅವಳು ಹೇಳಿದ ಹಾಗೆ ಈಗಲೇ ಬ್ರೇಕಪ್ ಆಗುವುದು ಉತ್ತಮ. ಇಲ್ಲಾ ಅವಳು ನಿಮಗೆ ಬೇಕೇ ಇದ್ದರೆ ನೀವು ಈ ರೀತಿ ಅವಳು ಉಪಯೋಗಿಸುವ ವಸ್ತುಗಳಿಗೆಲ್ಲ ಹೆಚ್ಚು ಮಹತ್ವ ಕೊಡಬೇಡಿ. ಮುಂದೆ ಮದುವೆಯಾದ ನಂತರ ನಿಮ್ಮ ಪ್ರೀತಿಗೋಸ್ಕರ ಆಕೆ ನಿಧಾನವಾಗಿ ಬದಲಾಗಬಹುದು.

LEAVE A REPLY