ಕೋತಿಗಳಿಂದಲೇ ಬೆಳೆಸಲ್ಪಟ್ಟ 10 ವರ್ಷದ ಹುಡುಗಿ ರಕ್ಷಣೆ

ಥೇಟ್ ಮಂಗನ ಥರವೇ ವರ್ತಿಸುತ್ತಾಳೆ ಈ ಬಾಲಕಿ

ಲಕ್ನೋ : ಕತ್ರನಿಯಾಘಾಟ್ ಅರಣ್ಯ ಪ್ರದೇಶದಲ್ಲಿ ಕೋತಿಗಳ ಜತೆ ವಾಸವಾಗಿದ್ದ ಹಾಗೂ ಈಗ `ಮೌಗ್ಲಿ ಹುಡುಗಿ’ ಎಂದೇ ಕರೆಯಲ್ಪಡುವ 10 ವರ್ಷದ  ಬಾಲಕಿಯನ್ನು ಬಹ್ರೈಚ್ ಪಟ್ಟಣದ ಆಸ್ಪತ್ರೆಯೊಂದಕ್ಕೆ ಕರೆತರಲಾಗಿದೆ.2 ಕೋತಿಗಳಿಂದಲೇ ಬೆಳೆಸಲ್ಪಟ್ಟಿದ್ದಾಳೆಂದು ತಿಳಿಯಲಾದ ಈ ಬಾಲಕಿಯ ಮಾತು ಮತ್ತು ಕೃತಿಗಳು ಮನುಷ್ಯರಂತಿಲ್ಲ. ಕೋತಿಗಳಂತೆಯೇ ವರ್ತಿಸುತ್ತಿರುವ ಈ ಬಾಲಕಿ ತನಗೆ ನೀಡಿದ ಆಹಾರವನ್ನು ನೆಲದಲ್ಲಿ ಹರಡಿ ಅವುಗಳಿಗೆ ಬಾಯಿ ಹಾಕಿ ಕೋತಿಗಳಂತೆಯೇ ತಿನ್ನುತ್ತಿದ್ದಾಳೆ.

A young Indian girl sits on a bed in a hospital in this image taken from video in Bahraich northern India Thursday April 6, 2017. Indian police are reviewing reports of missing children from recent years to try to identify the girl who was found in a forest with a group of monkeys. The girl, believed to be about 10 to 12 years old, was unable to speak, was wearing no clothes and was emaciated when she discovered in January and taken to a hospital in Bahraich. (KK Productions, via AP)

ಗ್ರಾಮಸ್ಥರು ಸೌದೆಗಾಗಿ ಕಾಡಿಗೆ ಹೋಗಿದ್ದ ಸಂದರ್ಭದಲ್ಲಿ ಎರಡು ತಿಂಗಳ ಹಿಂದೆ ಈ ಬಾಲಕಿ ಪತ್ತೆಯಾಗಿದ್ದಳು. ಸಂಪೂರ್ಣ ನಗ್ನಳಾಗಿದ್ದ ಆಕೆ ಕೋತಿಗಳ ಗುಂಪಿನೊಂದಿಗೆ ಅವುಗಳಂತೆಯೇ ಛಂಗನೆ ಹಾರುತ್ತಾ ಅತ್ತಿತ್ತ ಹೋಗುತ್ತಿದ್ದುದು ಕಂಡು ಬಂದಿತ್ತು. ಗ್ರಾಮಸ್ಥನೊಬ್ಬ ಆಕೆಯ ಬಳಿ ಹೋಗಲು ಯತ್ನಿಸಿದಾಗ  ಇತರ ಕೋತಿಗಳು ಆತನನ್ನು ಸುತ್ತುವರಿದ ಕಾರಣ ಆತ ಅಲ್ಲಿಂದ ಓಡಿ ಹೋಗಬೇಕಾಗಿ ಬಂದಿತ್ತು.

ಅಲ್ಲಿಂದ ಹಿಂದಿರುಗಿದ ಆತ ಇತರ ಗ್ರಾಮಸ್ಥರಿಗೆ ಈ ವಿಷಯ ತಿಳಿಸಿದ್ದು ಹಲವರು ಮೈಯ್ಯಲ್ಲಿ ಹಲವಾರು ಗಾಯಗಳಿದ್ದ ಬಾಲಕಿಯನ್ನು ರಕ್ಷಿಸಲು ಯತ್ನಿಸಿದ್ದರೂ ಪ್ರತಿ ಬಾರಿ ಕೋತಿಗಳು ಅವರ ಮೇಲೆ ದಾಳಿ ನಡೆಸುತ್ತಿದ್ದವು.

ಈ ಘಟನೆಯ ನಂತರ ಬಾಲಕಿಯ ಸುತ್ತಮುತ್ತ ಪಹರೆಗೆ ನಿಂತಂತೆ ಹಲವಾರು ಕೋತಿಗಳಿರುತ್ತಿದ್ದವು. ಸ್ಥಳೀಯ ಪೊಲೀಸರೂ ಈಕೆಯನ್ನು ರಕ್ಷಿಸಲು ವಿಫಲ ಯತ್ನ ನಡೆಸಿದ ಬಳಿಕ ಯುಪಿ 100 ಸರ್ವಿಸ್ ತಂಡವೊಂದು ಆಕೆಯನ್ನು ಕಷ್ಟದಿಂದ ಕಾರಿನೊಳಕ್ಕೆ ಹಾಕಿ ಅರೆ ಪ್ರಜ್ಞಾವಸ್ಥೆಯಲ್ಲಿದ್ದ ಆಕೆಯನ್ನು ಆಸ್ಪತ್ರೆಗೆ ಕರೆತಂದಿತ್ತು. ಮನುಷ್ಯರನ್ನು ನೋಡಿದ ಕೂಡಲೇ ಕೋತಿಗಳಂತೆ ಗುರಾಯಿಸುವ  ಈಕೆ ಕೋತಿಗಳೊಂದಿಗೆ ಹಲವಾರು ವರ್ಷಗಳಿಂದಿದ್ದಿರಬೇಕು ಎಂದು ಅಂದಾಜಿಸಲಾಗಿದೆ.

ಹೆಣ್ಣು ಮಗುವೆಂದು ಆಕೆಯ ಹೆತ್ತವರು ಆಕೆಯನ್ನು ತ್ಯಜಿಸಿರಬಹುದೆಂದು ಗ್ರಾಮಸ್ಥರು ಅಂದುಕೊಳ್ಳುತ್ತಿದ್ದಾರೆ. ಬಾಲಕಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆಕೆಯ ಉದ್ದನೆಯ ಉಗುರುಗಳನ್ನು  ಹಾಗೂ ಕೆದರಿದ್ದ ಕೂದಲುಗಳನ್ನು ಕತ್ತರಿಸಲಾಗಿದೆ ಹಾಗೂ ಆಕೆಯ ಮೈಯಲ್ಲಿದ್ದ ಗಾಯಗಳು ಗುಣವಾಗುತ್ತಿವೆ ಎಂದು ವೈದ್ಯರು ಹೇಳಿದ್ದಾರೆ. ಆಕೆಗೆ ಸೂಕ್ತ ಮಾನಸಿಕ ಚಿಕಿತ್ಸೆ ನೀಡುವ ಬಗ್ಗೆಯೂ ಯೋಚಿಸಲಾಗುತ್ತಿದೆ.