ತಾಯಿ ಜತೆ ಬಟ್ಟೆ ಒಗೆಯುತ್ತಿದ್ದ ಪುತ್ರಿ ಕೆರೆಗೆ ಬಿದ್ದು ಸಾವು

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಕುತ್ತಿಕ್ಕೋಲಿನಲ್ಲಿ ತಾಯಿ ಜತೆ ಬಟ್ಟೆ ಒಗೆಯುತ್ತಿದ್ದ ವೇಳೆ ಕಾಲು ಜಾರಿ ಕೆರೆಗೆ ಬಿದ್ದು ಪುತ್ರಿ ಸಾವಿಗೀಡಾಗಿದ್ದಾಳೆ.

ಕುತ್ತಿಕ್ಕೋಲ್ ಚಾಯಿತ್ತಡ್ಕದ ರಬ್ಬರ್ ಟ್ಯಾಪಿಂಗ್ ಕಾರ್ಮಿಕ ವಿಲ್ಸನ್ ಅವರ ಪುತ್ರಿ ಸಿನಿ ವಿಲ್ಸನ್ (17) ಸಾವಿಗೀಡಾದ ವಿದ್ಯಾರ್ಥಿನಿ. ಈಕೆ ಬೇತೂರುಪಾರ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್ ಒನ್ ವಿದ್ಯಾರ್ಥಿನಿಯಾಗಿದ್ದಳು.