ಮೊಬೈಲ್ ಬಳಕೆ : ಹೆತ್ತವರು ಬೈದರೆಂದು ಯುವತಿ ನೇಣಿಗೆ

ಸಾಂದರ್ಭಿಕ ಚಿತ್ರ

 ಬೆಂಗಳೂರು : ಇಡೀ ದಿನ ಮೊಬೈಲ್ ಫೋನ್ ಲೋಕದಲ್ಲಿಯೇ ಮುಳುಗಿರುವುದಕ್ಕೆ ಹೆತ್ತವರು ಬೈದು ಬುದ್ಧಿವಾದ ಹೇಳಿದರೆಂಬ ಒಂದೇ ಕಾರಣಕ್ಕೆ ಬೇಸತ್ತು 17 ವರ್ಷದ ಯುವತಿಯೊಬ್ಬಳು ಸೀಲಿಂಗ್ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ನಗರದ ಮಹಾಲಕ್ಷ್ಮಿ ಲೇಔಟಿನ ಮನೆಯೊಂದರಲ್ಲಿ ನಡೆದಿದೆ. ಆತ್ಮಹತ್ಯೆಗೈದ ಯುವತಿಯನ್ನು ಬಿಂದು ಬಸವರಾಜು ಎಂದು ಗುರುತಿಸಲಾಗಿದೆ. ಯುವತಿ ಸಾಯುವ ಮುನ್ನ ಯಾವುದೇ ಸುಸೈಡ್ ನೋಟ್ ಬರೆದಿಟ್ಟಿಲ್ಲ ಎಂದು ಪೊಲೀಸರು ಹೇಳಿದ್ದಾರೆ.