ಹಾವು ಕಚ್ಚಿ ಬಾಲಕಿ ಸಾವು

ಸಾಂದರ್ಭಿಕ ಚಿತ್ರ

 ನಮ್ಮ ಪ್ರತಿನಿಧಿ ವರದಿ

ಬಂಟ್ವಾಳ : ಹಾವು ಕಡಿತಕ್ಕೊಳಗಾಗಿ ತಾಲೂಕಿನ ಶಂಭೂರು ಗ್ರಾಮದ ಬಾಲಕಿಯೊಬ್ಬಳು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.

ಇಲ್ಲಿನ ಅಗ್ಗರಪಾದೆ ನಿವಾಸಿ ರತ್ನಾಕರ-ದಯಾಕರ ದಂಪತಿಯ ಏಕೈಕ ಪುತ್ರಿ ಅನ್ಸಿಕಾ (4) ಮನೆಯ ಕೋಳಿ ಗೂಡಿಗೆ ನುಗ್ಗಿದ ವೇಳೆ ಅಲ್ಲಿದ್ದ ಹಾವೊಂದು ಬಾಲಕಿಯ ತಲೆಗೆ ಕಡಿದ ಪರಿಣಾಮ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ತಕ್ಷಣ ಬಾಲಕಿಯನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಯಿತಾದರೂ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.