ಸ್ಕೂಲ್ ಬಸ್ಸಿನಡಿಗೆ ಬಿದ್ದು ಬಾಲಕಿ ಸಾವು

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಸ್ಕೂಲ್ ಬಸ್ಸಿನಲ್ಲಿ ಮರೆತುಬಿಟ್ಟಿದ್ದ ಟಿಫನ್ ಬಾಕ್ಸ್ ಪಡೆದುಕೊಳ್ಳುವ ಸಂದರ್ಭದಲ್ಲಿ ಅಚಾನಕ್ ಆಗಿ ಚಲಿಸಿದ ಬಸ್ ಬಾಲಕಿಯ ಪ್ರಾಣವನ್ನು ತೆಗೆದಿದೆ. ಘಟನೆ ಸುಳ್ಯ ಅರಂತೋಡಿನಲ್ಲಿ ಸೋಮವಾರ ನಡೆದಿದೆ.

ಖಾಸಗಿ ಶಾಲೆಯ ಒಂದನೇ ತರಗತಿ ವಿದ್ಯಾರ್ಥಿನಿ ಆಜ್ಞೇಯ ಬಾಲು (6) ಮೃತ ವಿದ್ಯಾರ್ಥಿನಿ. ಶಾಲೆ ಬಿಟ್ಟ ಬಳಿಕ ಸಂಜೆ 4.30ಕ್ಕೆ ಮನೆ ಕಡೆಗೆ ತೆರಳುತ್ತಿದ್ದ ಬಾಲಕಿ ಬಸ್ಸಿನಲ್ಲಿ ಬಾಕಿಯಾದ ಟಿಫಿನ್ ಬಾಕ್ಸ್ ನೀಡುವಂತೆ ಇತರೆ ವಿದ್ಯಾರ್ಥಿಗಳಲ್ಲಿ ಕೇಳಿದ್ದಳು. ಆದರೆ ಈ ವಿಚಾರ ಚಾಲಕಗೆ ಗೊತ್ತಿರಲಿಲ್ಲ. ಬಸ್ಸಿನೊಳಗಿದ್ದವರು ಟಿಫಿನ್ ಬಾಕ್ಸ್ ಹೊರಗಡೆ ನೀಡುವಷ್ಟರಲ್ಲಿ ಚಾಲಕ ಬಸ್ ಚಲಾಯಿಸಿದ್ದು, ಬಸ್ಸಿನಡಿ ಚಕ್ರಕ್ಕೆ ಪುಟ್ಟ ಬಾಲಕಿ ಸಿಲುಕಿಕೊಂಡು ತೀವ್ರ ಗಾಯಗೊಂಡಿದ್ದಳು. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾಳೆ.

ಸುಳ್ಯ ಪೊಲೀಸರು ಬಸ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

LEAVE A REPLY