ರಾಷ್ಟ್ರ ಕವಿ ಮಂಜೇಶ್ವರ ಗೋವಿಂದ ಪೈ ಗಿಳಿವಿಂಡು ಯೋಜನೆಗೆ ಚಾಲನೆ 19ಕ್ಕೆ

ಗೋವಿಂದ ಪೈ ನಿವಾಸದಲ್ಲಿ ಮಾಹಿತಿ ನೀಡಿದ ಅಧಿಕೃತರು

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ರಾಷ್ಟ್ರ ಕವಿ ಮಂಜೇಶ್ವರ ಗೋವಿಂದ ಪೈ ನಿವಾಸವನ್ನು ಪುನರ್ ನವೀಕರಿಸಿ ಸಿದ್ಧಗೊಳಿಸಲಾದ ಗೋವಿಂದ ಪೈ ಸ್ಮಾರಕ ಗಿಳಿವಿಂಡು ಯೋಜನೆ ಜನವರಿ 19ಕ್ಕೆ ಸಂಜೆ 4 ಗಂಟೆಗೆ ಚಾಲನೆ ನೀಡುವುದಾಗಿ ಸಂಬಂಧಪಟ್ಟವರು ಗೋವಿಂದ ಪೈ ನಿವಾಸದ ಆವರಣದಲ್ಲಿ ಕರೆದ ಸರ್ವ ಪಕ್ಷ ಸಭೆಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ನೆನೆಗುದಿಗೆ ಬಿದ್ದಿದ್ದ ಯೋಜನೆಯನ್ನು ಮತ್ತೆ ಕೈಗೆತ್ತಿಗೊಂಡು ಕನಸನ್ನು ಸಾಕಾರಗೊಳಿಸುವಲ್ಲಿ ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿಯವರು ಸೇವೆ ಶ್ಲಾಘನೀಯವೆಂಬುದಾಗಿ ಸಭೆ ಅಭಿಪ್ರಾಯಿಸಿತು.

ಜನವರಿ 19ರ ಸಂಜೆ ಕೇರಳ ಹಾಗೂ ಕರ್ನಾಟಕ ಮುಖ್ಯಮಂತ್ರಿಯವರನ್ನು ಗೋವಿಂದ ಪೈ ನಿವಾಸಕ್ಕೆ ಕರೆ ತರಲಾಗುವುದು. ಬಳಿಕ ಉಭಯ ರಾಜ್ಯಗಳ ಮಂತ್ರಿ, ಶಾಸಕರ ಹಾಗೂ ಜನಪ್ರತಿನಿಧಿಗಳ ಸಮ್ಮುಖದಲ್ಲಿ ರಾಷ್ಟ್ರ ಕವಿಯವರ ಗಿಳಿವಿಂಡು ಯೋಜನೆಗೆ ಚಾಲನೆ ಲಭಿಸಲಿದೆ.