ಕೈ ಕಮಾಂಡಿನಿನಿಂದ ಡೀಕೇಶಿಗೆ ಗಿಫ್ಟ್ ?

ಬೆಂಗಳೂರು : ರಾಜ್ಯಸಭೆ ಚುನಾವಣೆಯ ಕುದುರೆ ವ್ಯಾಪಾರದಿಂದ ಪಾರಾಗಲು ರಾಜ್ಯಕ್ಕೆ ಬಂದ ಗುಜರಾತಿನ 44 ಕಾಂಗ್ರೆಸ್ ಶಾಸಕರಿಗೆ ರಕ್ಷಣೆ ನೀಡಿದ್ದ ಸಚಿವ ಡೀಕೆ ಶಿವಕುಮಾರ್  ಐಟಿ ದಾಳಿ ನಡೆದರೂ ವಿಚಲಿತರಾಗದೇ ಶಾಸಕರನ್ನು ಸುರಕ್ಷಿತವಾಗಿ ಆಗಸ್ಟ್ 7ರಂದು ಅಹಮದಾಬಾದಿಗೆ ಕಳುಹಿಸಿಕೊಟ್ಟಿದ್ದರು. ಪಕ್ಷ ನಿಷ್ಠೆ ಮೆರೆದ ಡೀಕೇಶಿಗೆ ಹೈಕಮಾಂಡ್ ಭಾರೀ ಗಿಫ್ಟ್ ನೀಡುವ ಸಾಧ್ಯತೆ ಇದೆ.ಡಿಸೆಂಬರಿನಲ್ಲಿ ನಡೆಯಲಿರುವ ಗುಜರಾತ್ ಚುನಾವಣಾ ಉಸ್ತುವಾರಿಯಾಗಿ ಶಿವಕುಮಾರ್ ಅವರನ್ನು ನಿಯೋಜಿಸುವ ಸಾಧ್ಯತೆ ಇದೆ ಎನ್ನಲಾಗಿದೆ.