ಗ್ರಾಮೀಣ ಭಾರತ ತಿಳಿಯಲು ಜರ್ಮನ್ ವಿದ್ಯಾರ್ಥಿಗಳ ಆಸಕ್ತಿ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಜರ್ಮನಿ ಮೂಲದ ಯುವಜನತೆಯ ಗುಂಪೊಂದು ಗ್ರಾಮೀಣ ಭಾರತೀಯ ಸಂಸ್ಕøತಿ ಕಲಿಕೆಯ ಬಗ್ಗೆ ಆಸಕ್ತಿ ತೋರಿಸಿದ್ದಾರೆ. ಜರ್ಮನ್ ಸರ್ಕಾರದ ಬೆಂಬಲದೊಂದಿಗೆ ಭಾರತೀಯ ಸರ್ಕಾರೇತರ ಸಂಘಟನೆಗಳ ಸಂಪರ್ಕದ ಮುಖಾಂತರ ಅವರು ಗ್ರಾಮೀಣ ಭಾರತದ ಅಭಿವೃದ್ಧಿಯ ಬಗ್ಗೆ ಅಧ್ಯಯನಕ್ಕೆ ಪ್ರಾರಂಭಿಸಿದ್ದಾರೆ.

ಸಾಂಸ್ಕøತಿಕ ವಿನಿಮಯದ ಉದ್ದೇಶದೊಂದಿಗೆ ಜರ್ಮನಿ ಮೂಲದ ವಿದ್ಯಾರ್ಥಿಗಳಾದ ಸೆಬಸ್ಟೈನ್ ಮುಲ್ಲರ್, ಡೇನಿಯಲ್ ಹಿರ್ರೆ ಮತ್ತು ಅರಿಯನ್ ವೀಸೆಕೆ  ಎಂಬವರು ಕುಂದಾಪುರದ ಮೂಲದ ಸಂಘಟನೆ ಫೀಲ್ಡ್ ಸರ್ವಿಸ್ ಮತ್ತು ಇಂಟರ್ ಕಲ್ಚರಲ್ ಮುಖಾಂತರ ಕುಂದಾಪುರಕ್ಕೆ ತಲುಪಿದ್ದಾರೆ. ಬಳಿಕ ಅವರು ಭಾರತದ ಗ್ರಾಮೀಣ ಸಂಸ್ಕøತಿ, ಶಿಕ್ಷಣ ಮತ್ತು ಜೀವನ ಶೈಲಿ ಅಧ್ಯಯನಕ್ಕಾಗಿ ಮಂದಾರ್ತಿಯ ಸೋಷಿಯಲ್ ಇನ್ಫ್ರಾಸ್ಟ್ರಕ್ಚರ್ ಡೆವೆಲೆಪ್‍ಮೆಂಟ್ ಸೊಸೈಟಿ ಶಾಖಾ ಕಚೇರಿಗೆ ಸೇರ್ಪಡೆಗೊಂಡಿದ್ದಾರೆ.

`ಜರ್ಮನ್ ಸರ್ಕಾರವು ದೇಶದ ಯುವಕರು ಸ್ವಯಂ ಉದ್ಯೋಗಸ್ಥರಾಗಲು ಇತರ ದೇಶಗಳ ಬಗ್ಗೆ ಅಧ್ಯಯನ ನಡೆಸಲು ಪ್ರೋತ್ಸಾಹಿಸುತ್ತಿದೆ. ಭಾರತದ ಗ್ರಾಮೀಣ ಜನತೆಯ ಜೀವನಶೈಲಿ ಜರ್ಮನಿಗಿಂತ ಸಂಪೂರ್ಣ ಭಿನ್ನವಾಗಿದೆ. ಭಾರತದ ರೈತರು ಆರೋಗ್ಯಕರ ಹಾಲು ಮತ್ತು ತರಕಾರಿಗಳನ್ನು ಉತ್ಪಾದಿಸುತ್ತಿದ್ದಾರೆ. ಜರ್ಮನಿಯಲ್ಲಿ ಇದರ ಬಗ್ಗೆ ಬೆಳಕು ಚೆಲ್ಲುವ ಅವಶ್ಯಕತೆ ಇದೆ’ ಎಂದು ಸೆಬಾಸ್ಟಿಯನ್ ಮುಲ್ಲರ್ ಹೇಳಿದ್ದಾರೆ.

ಕುಂದಾಪುರದಿಂದ ಉಡುಪಿ ತಾಲೂಕಿನವರೆಗೆ ಹಲವು ರೈತರನ್ನು ಡೇನಿಯಲ್ ಭೇಟಿ ಮಾಡಿದ್ದಾರೆ. 1ಪ್ರತಿ ಪ್ರದೇಶವು ಸಂಸ್ಕøತಿ ಮತ್ತು ಸಂಪ್ರದಾಯದಲ್ಲಿ ವಿಶೇಷತೆಯನ್ನು ಹೊಂದಿವೆ ಮಾತ್ರವಲ್ಲ ನಾವು ಅನೇಕ ಆರೋಗ್ಯಕ್ಕೆ ಸಂಬಂಧಪಟ್ಟ ಅಂಶಗಳನ್ನು ಕಲಿತುಕೊಂಡಿದ್ದೇವೆ. ಆಯುರ್ವೇದ, ಯೋಗ ಮತ್ತು ಇತರ ಸಾಂಪ್ರದಾಯಿಕ ವ್ಯವಸ್ಥೆಗಳು ಆಸಕ್ತಿದಾಯಕವಾಗಿದೆ’ ಎಂದು ಹಿರ್ಲೆ ಹೇಳಿದ್ದಾರೆ.