`ಮಹಿಳೆಯರ ಲಿಂಗಬೇಧಭಾವದ ನೋವು ಅವ್ಯಾವತ ಮುಂದುವರಿದಿದೆ”

ಮಣಿಪಾಲ : ಮಣಿಪಾಲ ವಿಶ್ವವಿದ್ಯಾನಿಲಯದ ಯುರೋಪಿಯನ್ ಸ್ಟಡೀಸ್ ಇಲಾಖೆಯು ಪ್ರಸಿದ್ದ ವೇದಿಕೆ ಮತ್ತು ಬೆಳಕಿನ ವಿನ್ಯಾಸಕಿ ಹಾಗೂ ಹಲವಾರು ಬ್ರಾಡವೇ ಪ್ರದರ್ಶನಗಳ ಮೂಲಕ ತನ್ನ ಕೈಚಳಕ ನೀಡುವುದರಲ್ಲಿ ಚಿರಪರಿಚಿತರಾಗಿರುವ ಹಾಗೂ ತಜ್ಞರಾಗಿರುವ ಕಾತಿ ಪರ್ಕಿನ್ಸ್ ಅವರನ್ನು ಆಹ್ವಾನಿಸಿ ತಮ್ಮ ಅನುಭವ ಹಂಚಿಕೆಗಾಗಿ ವೇದಿಕೆ ನಿರ್ಮಿಸಿತ್ತು.

ಪ್ರೊಫೆಸರ್ ಪರ್ಕಿನ್ಸ್ ಆಫ್ರಿಕನ್ ಅಮೆರಿಕನ್ ಜನಾಂಗೀಯದವರಾಗಿದ್ದು, ಅಮೆರಿಕದ ದಕ್ಷಿಣ ಪ್ರಾಂತ್ಯದಲ್ಲಿ ಬೆಳೆದರು ಮತ್ತು ಬೆಳಕು ಮತ್ತು ಸೆಟ್ ವಿನ್ಯಾಸದಲ್ಲಿ ತರಬೇತಿ ಪಡೆದಿದ್ದಾರೆ  ಸಾಮಾನ್ಯವಾಗಿ ಆಫ್ರಿಕನ್ ಅಮೆರಿಕನ್ನರು ಸಂಗೀತ ಅಥವಾ ನಾಟಕಗಳ ಡ್ಯಾನ್ಸ್ ತುಣುಕುಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಆದರೆ ಅವರ ಸಂಶೋಧನೆಯ ಪ್ರಕಾರ ಈ ಜನರು ರಂಗದ ಇತರ ಕ್ಷೇತ್ರಗಳಲ್ಲೂ ಅದ್ಭುತವಾದ ಕೊಡುಗೆಗಳನ್ನು ನೀಡುತ್ತಿರುವುದನ್ನು ಗಮನಿಸಬಹುದು. ಪರ್ಕಿನ್ಸ್ ಸ್ವತಃ ನಾಟಕಗಳಲ್ಲಿ ಕೆಲಸ ಮಾಡುವ ಆಸಕ್ತಿ ತೋರಿಸಿದ್ದು, ಐತಿಹಾಸಿಕ ಅಥವಾ ಸಾಮಾಜಿಕ ಘಟನೆಗಳ ಬಗ್ಗೆ ಚಿಂತನೆ ನಡೆಸಿ ವಿಷಯ ಉತ್ತಮವಾಗಿರುವ ನಾಟಕಗಳನ್ನು ಸಿದ್ಧಪಡಿಸುತ್ತಿದ್ದಾರೆ.

ಮಹಿಳೆಯರ ಸಾರ್ವತ್ರಿಕ ಪ್ರವೃತ್ತಿ ಬಗ್ಗೆ ಮಾತನಾಡಿದ ಪರ್ಕಿನ್, ಮಹಿಳೆಯರು ಲಿಂಗ ಬೇಧಭಾವದ ಬೇಟೆಯಾಗುತ್ತಿರುವುದು ಅವ್ಯಾಹತವಾಗಿ ಮುಂದುವರಿದಿದೆ ಎಂದು ಹೇಳಿದ್ದಾರೆ.  ಪ್ರಶ್ನೋತ್ತರ ಅವಧಿಯಲ್ಲಿ ಪರ್ಕಿನ್ಸ್, ಅಂತರ್ ಜನಾಂಗೀಯ ವರ್ಣಭೇದ, ಸ್ತ್ರೀ ತಾರತಮ್ಯ, ಸೌಂದರ್ಯ ಶಾಸ್ತ್ರದ ರಾಜಕೀಯ ಅಂಶಗಳು, ವರ್ಣ, ಅಂಧ ಜಾತಿ ಮತ್ತು ಭಾರತದ  ಜಾತಿ ಪದ್ದತಿ  ಮೊದಲಾದ ವಿಚಾರಗಳ ಬಗ್ಗೆ ಬಹಳ ಮುತುವರ್ಜಿಯಿಂದ ಮಾತನಾಡಿದರು.