ಗೌರಿ ಹಂತಕರನ್ನು ಬಂಧಿಸಲು ಆಗ್ರಹ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ವಿಚಾರವಾದಿ, ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಆರೋಪಿಗಳನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ನ್ಯಾಷನಲ್ ವುಮನ್ಸ್ ಫ್ರಂಟ್ ಸದಸ್ಯರು ಬುಧವಾರದಂದು ದ ಕ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಲೇಖಕಿ ಜ್ಯೋತಿ ಗುರುಪ್ರಸಾದ್, “ಸಾಮಾಜಿಕ ಹೋರಾಟಗಾರ್ತಿಯಾಗಿ ಗುರು ತಿಸಿಕೊಂಡಿದ್ದ ಗೌರಿ ಕೇವಲ ಹೋರಾಟಗಾರರಷ್ಟೇ ಅಲ್ಲದೇ ಇಡೀ ಸಮಾಜದ ದುರ್ಬಲ ವರ್ಗದವರ ಧ್ವನಿಯಾಗಿ ನಿಂತಿದ್ದರು. ಇವರ ಹತ್ಯೆಯನ್ನು ಒಪ್ಪಲು ಸಾಧ್ಯವೇ ಇಲ್ಲ. ಅಭಿಪ್ರಾಯ ಭೇದ ಇದ್ದರೂ ಅದನ್ನು ಮಾತುಕತೆ ಮೂಲಕ, ಚರ್ಚೆ, ಚಳುವಳಿ ಮೂಲಕ ಬಗೆಹರಿಸಿಕೊಳ್ಳಬೇಕೇ ವಿನಾಃ ಹತ್ಯೆ ಮೂಲಕ ಬಾಯಿ ಮುಚ್ಚಿಸುವುದಲ್ಲ. ಹೇಡಿಗಳಷ್ಟೇ ಇಂತಹ ದುಷ್ಕøತ್ಯಗಳನ್ನು ಮಾಡಲು ಸಾಧ್ಯ” ಎಂದರು.