ಗೌರಿ ಹತ್ಯೆ ಪ್ರಕರಣ

ರೌಡಿ ಶೀಟರ್ ಗಿರಿ ವಿಚಾರಣೆ

ಬೆಂಗಳೂರು : ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳ (ಎಸ್‍ಐಟಿ) ರೌಡಿ ಶೀಟರ್ ಕುಣಿಗಲ್ ಗಿರಿ ಹಾಗೂ ಆತನ ಆರು ಸಹಚರರನ್ನು ವಿಚಾರಣೆಗೊಳಪಡಿಸಿದೆ.

ಮತ್ತೊಂದು ಪ್ರಕರಣವೊಂದರಲ್ಲಿ ಮೂರು ವರ್ಷಗಳ ಹಿಂದೆ ಬಂಧಿತನಾಗಿರುವ ಕುಣಿಗಲ್ ಗಿರಿ, ಸದ್ಯಕ್ಕೆ ರಾಮನಗರ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿ ಬಂಧಿತನಾಗಿದ್ದಾನೆ. ಗೌರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ವಿಚಾರಗಳು ಕುಣಿಗಲ್ ಗಿರಿ ಹಾಗೂ ಆತನ ಸಹಚರರಿಗೆ ಗೊತ್ತಿರುವ ಸಾಧ್ಯತೆಗಳನ್ನು ಪತ್ತೆ ಹಚ್ಚಿರುವ ಎಸ್‍ಐಟಿ ಅಧಿಕಾರಿಗಳು

ಇದೇ ಕಾರಣಕ್ಕಾಗಿಯೇ ಆತನನ್ನು ವಿಚಾರಣೆಗೊಳಪಡಿಸಿದ್ದಾರೆಂದು ವರದಿಯಲ್ಲಿ ಹೇಳಲಾಗಿದೆ.ಈಗಾಗಲೇ ಎಸ್‍ಐಟಿ ತಂಡದ ಅಧಿಕಾರಿಯೊಬ್ಬರು ಗಿರಿಯನ್ನು ಒಮ್ಮೆ ವಿಚಾರಣೆ ಮಾಡಿದ್ದು, ಶೀಘ್ರದಲ್ಲೇ ಮತ್ತಷ್ಟು ಸುತ್ತಿನ ವಿಚಾರಣೆ ನಡೆಸಿ ಗಿರಿಯಿಂದ ಮಾಹಿತಿ ಪಡೆಯಲು ಅಧಿಕಾರಿಗಳು ಯತ್ನಿಸಲಿದ್ದಾರೆಂದು ಹೇಳಲಾಗಿದೆ.

ಯಾರು ಈ ಕುಣಿಗಲ್ ಗಿರಿ?ಕುಣಿಗಲ್ ಗಿರಿ ರೌಡಿಶೀಟರ್, 2014ರಲ್ಲಿ ಆಂಧ್ರದ ಅನಂತಪುರದಲ್ಲಿ ಗಿರಿ ಮೇಲೆ ಗುಂಡಿನ ದಾಳಿ ನಡೆಸಿ ಬಂಧಿಸಲಾಗಿತ್ತು. ಬಂಧನದ ನಂತರ ಗಿರಿ ನೂರಕ್ಕೂ ಹೆಚ್ಚು ಅಪಹರಣ, ಸುಲಿಗೆ, ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿತ್ತು.